ನವದೆಹಲಿ, ಜ.24 (DaijiworldNews/HR): "ದೇಶದ ಅಭಿವೃದ್ಧಿಯಲ್ಲಿ ಉತ್ತರ ಪ್ರದೇಶ ರಾಜ್ಯವು ಪ್ರಮುಖ ಪಾತ್ರ ವಹಿಸಿದೆ" ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಈ ಕುರಿತು ಉತ್ತರ ಪ್ರದೇಶದ ಸ್ಥಾಪನಾ ದಿನದ ಅಂಗವಾಗಿ ಟ್ವೀಟ್ ಮಾಡಿ ಶುಭಾಶಯ ಕೋರಿರುವ ಅವರು, "ಶ್ರೀಮಂತ ಇತಿಹಾಸ, ಕಠಿಣ ಕೆಲಸ ಮಾಡುವ ಜನರು ಮತ್ತು ರೋಮಾಂಚಕ ಸಂಸ್ಕೃತಿಗೆ ಹೆಸರುವಾಸಿಯಾದ ಉತ್ತರ ಪ್ರದೇಶ ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ರಾಜ್ಯವು ಸಮೃದ್ಧಿಯಾಗಲಿ" ಎಂದು ಹೇಳಿದ್ದಾರೆ.