ಪಟ್ನಾ, ಜ.24 (DaijiworldNews/MB) : ಬಿಹಾರದಾದ್ಯಂತ ಜನವರಿ 30 ರಂದು ಬೃಹತ್ ಮಾನವ ಸರಪಳಿ ನಿರ್ಮಿಸಿ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸಲು ರಾಷ್ಟ್ರೀಯ ಜನತಾದಳ (ಆರ್ಜೆಡಿ) ನೇತೃತ್ವದ ಮಹಾ ಮೈತ್ರಿಕೂಟವು ತೀರ್ಮಾನಿಸಿದ್ದು ಸಿಪಿಎಂ, ಕಾಂಗ್ರೆಸ್, ಸಿಪಿಐ ಸೇರಿದಂತೆ ಮಹಾ ಮೈತ್ರಿಕೂಟದ ಎಲ್ಲಾ ಮಿತ್ರರಾಷ್ಟ್ರಗಳು ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದೆ.
ಆರ್ಜೆಡಿ ನಾಯಕ ತೇಜಸ್ವಿ ಯಾದವ್
ಆರ್ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ಮಾನವ ಸರಪಳಿ ಆಂದೋಲನಕ್ಕಾಗಿ ಪಕ್ಷದ ಕಾರ್ಯಕರ್ತರನ್ನು ಸಿದ್ದರನ್ನಾಗಿಸಲು ಪಕ್ಷದ ಜಿಲ್ಲಾಧ್ಯಕ್ಷರುಗಳಿಗೆ ಸೂಚನೆ ನೀಡಿದ್ದಾರೆ.
ಆಯಾ ಜಿಲ್ಲೆಯಲ್ಲಿ ಮಾನವ ಸರಪಳಿ ರಚನೆಗೆ ಸ್ಥಳಗಳನ್ನು ತೀರ್ಮಾನಿಸಲು ಆರ್ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ತಿಳಿಸಿದ್ದಾರೆ.
ದೆಹಲಿಯ ವಿವಿಧ ಗಡಿಯಲ್ಲಿ ಕಳೆದ ತಿಂಗಳುಗಳ ಕಾಲದಿಂದ ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಈ ಮೂಲಕ ನಾವು ಬೆಂಬಲ ಸೂಚಿಸುತ್ತೇವೆ ಎಂದು ಆರ್ಜೆಡಿ ತಿಳಿಸಿದೆ.