ವಯನಾಡ್,ಜ.24 (DaijiworldNews/HR): ಕಾಡಾನೆ ದಾಳಿಯಿಂದಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಎಂಬಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಣ್ಣೂರು ಮೂಲದ ಉಪನ್ಯಾಸಕಿ ಸಹಾನಾ ಎಂಬುವರು ತಮ್ಮ ಕುಟುಂಬ ಸದಸ್ಯರೊಂದಿಗೆ ರೆಸಾರ್ಟ್ಗೆ ಬಂದಿದ್ದು, ಈ ವೇಳೆ ಅವರು ಟೆಂಟ್ವೊಂದರಲ್ಲಿ ತಂಗಿದ್ದರು. ಆನೆಯ ಶಬ್ಧ ಕೇಳಿ ಸಹಾನಾ ಮತ್ತು ಅವರ ಕುಟುಂಬದ ಸದಸ್ಯರಿಬ್ಬರು ಟೆಂಟ್ನಿಂದ ಹೊರ ಬಂದಿದ್ದು, ಈ ವೇಳೆ ಕಾಡಾನೆಯೊಂದು ಅವರ ಮೇಲೆ ದಾಳಿ ನಡೆಸಿದ್ದು ಕುಟುಂಬದ ಸದಸ್ಯರು ತಪ್ಪಿಸಿಕೊಂಡರು ಆದರೆ ಸಹಾನಾ ಆನೆಯ ದಾಳಿಗೆ ಸಿಕಿದರು" ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಸಹಾನಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆತರಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ವಯನಾಡ್ ಜಿಲ್ಲಾಧಿಕಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.