ಉಡುಪಿ, ಜ.24 (DaijiworldNews/MB) : ಗಂಗಾಧರ್ ಜಿ. ಕಡೆಕಾರ್ ಇವರು ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿಸುತ್ತಿ ಬೀಗ ಹಾಕಿ ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ ಸಮುದ್ರದಲ್ಲಿ 1.400 ಕಿಮೀ ಈಜಿ ಇಂಡಿಯನ್ ಬುಕ್ ಅಫ್ ರೆಕಾರ್ಡ್ಸ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಶ್ರೀ ದೇವಿ ಭಜನಾ ಮಂದಿರ ಬಳಿಯ ಪಡುಕರೆ ಕಡಲ ಕಿನಾರೆಯಲ್ಲಿ ಇಂದು ಮುಂಜಾನೆ ಈ ಸಾಹಸವನ್ನು ಪ್ರದರ್ಶಿಸಲಾಯಿತು.
ಪದ್ಮಾಸನ ಭಂಗಿಯಲ್ಲಿದ್ದ ಗಂಗಾಧರ್ ಅವರ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಲಾಗಿತ್ತು. ಬೆಳಗ್ಗೆ 8.36 ಸಮುದ್ರದಲ್ಲಿ ಈಜು ಆರಂಭಿಸಿದ ಅವರು 9.40ಕ್ಕೆ ದಡ ಸೇರಿದರು. ಕರಾವಳಿ ಕಾವಲು ಪಡೆಯ ಪೋಲಿಸರು ಗಂಗಾಧರ್ರವರಿಗೆ ರಕ್ಷಣೆ ಒದಗಿಸಿದ್ದರು.
ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ದಾಖಲೆ ಬರೆದ ಗಂಗಾಧರ್ ಜಿ. ಕಡೆಕಾರ್ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕಾ ಫೇಡರೇಶನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಕಾರ್ತಿಕ್ ಗ್ರೂಪ್ ಮಲ್ಪೆ ಮ್ಯಾನೇಜಿಂಗ್ ಡೈರೆಕ್ಟರ್ ಹರಿಯಪ್ಪ ಕೋಟ್ಯಾನ್, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು, ಕರಾವಳಿ ಕಾವಲುಪಡೆ ಪೊಲೀಸ್ ಅಧೀಕ್ಷಕರಾದ ಚೇತನ್ ಆರ್, ತೀರ್ಪುಗಾರರಾದ ಹರೀಶ ಆರ್ ಮತ್ತು ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್ (ರಿ.) ಕಡೆಕಾರ್ ಇದರ ಉಪಾಧ್ಯಕ್ಷರಾದ ಚಂದ್ರ ಎಂ ಕುಂದರ್, ಹರ್ಷ ಮೆಂಡನ್, ಜನಾರ್ದನ ಕೋಟ್ಯಾನ್ ಮತ್ತು ಸರ್ವ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.