ಪ್ರಯಾಗರಾಜ್, ಜ.24 (DaijiworldNews/MB) : ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ತಮ್ಮ 30 ತಿಂಗಳ ಸಂಬಳವನ್ನು ಹಸ್ತಾಂತರಿಸಿದ್ದಾರೆ.
ಈ ಮೊತ್ತವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಸದಸ್ಯ ಸ್ವಾಮಿ ವಾಸುದೇವಾನಂದ್ ಸರಸ್ವತಿ ಅವರಿಗೆ ಶನಿವಾರ ಹಸ್ತಾಂತರಿಸಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮೌರ್ಯ, "ನಾನು ಮೊದಲು ರಾಮ ಭಕ್ತ, ನಂತರ ರಾಜ್ಯದ ಉಪಮುಖ್ಯಮಂತ್ರಿ" ಎಂದು ಹೇಳಿದರು.
''ದೇವಾಲಯದ ಅಭಿಯಾನದಲ್ಲಿ ಐದು ತಲೆಮಾರುಗಳು ತಮ್ಮ ಪ್ರಾಣ ತ್ಯಾಗ ಮಾಡಿರುವುದರಿಂದ ಇಡೀ ರಾಷ್ಟ್ರದ ಸಹಕಾರವನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ಕೋರಲಾಗುತ್ತಿದೆ'' ಎಂದು ಕೂಡಾ ಹೇಳಿದರು.
ದೇವಾಲಯ ನಿರ್ಮಾಣಕ್ಕಾಗಿ ರಾಜ್ಯದ ಪಿಡಬ್ಲ್ಯುಡಿ ನೌಕರರ ಪರವಾಗಿ ಉಪಮುಖ್ಯಮಂತ್ರಿ 1.10 ಕೋಟಿ ರೂಪಾಯಿಯ ಚೆಕ್ ಅನ್ನು ಕೂಡಾ ಈ ಸಂದರ್ಭದಲ್ಲೇ ಹಸ್ತಾಂತರಿಸಿದ್ದಾರೆ.