ನವದೆಹಲಿ,ಜ.24 (DaijiworldNews/HR): "ಗಣರಾಜ್ಯೋತ್ಸವದ ದಿನ ರೈತರು ನಡೆಸಲು ಉದ್ದೇಶಿಸಿರುವ ಕಿಸಾನ್ ಗಣತಂತ್ರ ಪರೇಡ್ನಲ್ಲಿ 2 ಲಕ್ಷ ಟ್ರ್ಯಾಕ್ಟರ್ಗಳು ಭಾಗವಹಿಸಲಿದ್ದು ಅದನ್ನು ನೋಡಿಕೊಳ್ಳಲು 2,500 ಸ್ವಯಂ ಸೇವಕರನ್ನು ನಿಯೋಜಿಸಲಾಗುವುದು" ಎಂದು ರೈತ ಮುಖಂಡರು ಹೇಳಿದ್ದಾರೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮಾತನಾಡಿರುವ ಕೀರ್ತಿ ಕಿಸಾನ್ ಯೂನಿಯನ್ ಅಧ್ಯಕ್ಷ ನಿರ್ಭಯ್ ಸಿಂಗ್ ದುಡಿಕೆ, "ಪಂಜಾಜ್ ರೈತ ಮುಖಂಡರೊಂದಿಗೆ ಸತತ 3 ಗಂಟೆಗಳ ಕಾಲ ಸಭೆ ನಡೆಸಲಾಗಿದ್ದು, ಪರೇಡ್ನಲ್ಲಿ ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್ಗಳ ಪಾಲ್ಗೊಳ್ಳಲಿವೆ" ಎಂದರು.
ಇನ್ನು "ಟ್ರ್ಯಾಕ್ಟರ್ ಪರೇಡ್ಗೆ ಸಂಬಂಧಿಸಿ ಪ್ರತಿಭಟನಾ ನಿರತ ರೈತರ ಸಂಘಟನೆಗಳು ಪೊಲೀಸರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಪರೇಡ್ ನಡೆಸಲು ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ" ಎಂದು ತಿಳಿಸಿದರು.