ಉನ್ನಾವೊ, ಜ.24 (DaijiworldNews/MB) : ''ಭಾರತದ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರನ್ನು ಹತ್ಯೆ ಮಾಡಿದ್ದು ಕಾಂಗ್ರೆಸ್'' ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಉನ್ನಾವೊದ ಔರಸ್ ನ ಉಟ್ರಾ ದಕೌಲಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ''ಭಾರತದ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರನ್ನು ಹತ್ಯೆ ಮಾಡಿದ್ದು ಕಾಂಗ್ರೆಸ್'' ಎಂದು ಹೇಳಿದ್ದು ಮಾತ್ರವಲ್ಲದೇ, ''ಸುಭಾಷ್ ಚಂದ್ರ ಬೋಸ್ ಅವರ ಜನಪ್ರಿಯತೆ ಎದುರು ಮಹಾತ್ಮಾ ಗಾಂಧಿಯಾಗಲಿ, ಪಂಡಿತ್ ಜವಹರಲಾಲ್ ನೆಹರೂ ಆಗಲಿ ಯಾರಿಗೂ ನಿಲ್ಲುವ ಧೈರ್ಯವಿರಲಿಲ್ಲ. ಈ ಹಿನ್ನೆಲೆ ಕಾಂಗ್ರೆಸ್ ತನ್ನ ಒಳಸಂಚಿನಿಂದ ಸುಭಾಷ್ ಚಂದ್ರ ಬೋಸ್ ಅವರನ್ನು ಹತ್ಯೆ ಮಾಡಿದೆ'' ಎಂದು ಆರೋಪಿಸಿದ್ದಾರೆ.