ಕೊಯಂಬತ್ತೂರು, ಜ.24 (DaijiworldNews/HR): "ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಎಸ್ಟಿ ಪುನರ್ಪರಿಶೀಲಿಸುವುದಕ್ಕೆ ಬದ್ಧವಾಗಿದೆ" ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಪ್ರಸ್ತುತ ಇರುವ ತೆರಿಗೆ ವ್ಯವಸ್ಥೆಯು ಸಣ್ಣ ಮತ್ತು ಮಧ್ಯಮ ಕೈಗಾರಿಕಗಳನ್ನು ದುರ್ಬಲಗೊಳಿಸಿದೆ. ಇನ್ನು ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರಸ್ತುತ ಇರುವ ಜಿಎಸ್ಟಿಗೆ ಹೊಸ ರೂಪ ನೀಡಿ ಒಂದು ತೆರಿಗೆ ಕನಿಷ್ಠ ತೆರಿಗೆಯನ್ನು ಜಾರಿಗೊಳಿಸಲಾಗುವುದು" ಎಂದು ಭರವಸೆ ನೀಡಿದ್ದಾರೆ.
ಇನ್ನು "ಚೀನಾ ಮತ್ತು ಬಾಂಗ್ಲಾದೇಶಗಳ ಜೊತೆ ಸ್ಪರ್ಧಿಸಲು ದೇಶದ ಎಂಎಸ್ಎಂಇಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಅಗತ್ಯತ್ಯವಿದ್ದು, ಭಾರತದ ಭವಿಷ್ಯವೇ ಈ ಎಂಎಸ್ಎಂಇಗಳು" ಎಂದು ಹೇಳಿದ್ದಾರೆ.