ಮಂಗಳೂರು, ಜ. 23 (DaijiworldNews/SM): ದಕ್ಷಿಣ ಕನ್ನಡ ಆರೋಗ್ಯ ಇಲಾಖೆ ವರದಿಯಂತೆ ಶನಿವಾರ ಜಿಲ್ಲೆಯಲ್ಲಿ 31 ಹೊಸ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 33,561ಕ್ಕೆ ಏರಿಕೆಯಾಗಿದೆ. ಈ ಪೈಕಿ 265 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ.
ಒಟ್ಟು 5,10,151 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 4,76,590 ನೆಗೆಟಿವ್ ಆಗಿದೆ. ಶನಿವಾರ 18 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇದುವರೆಗೆ ಒಟ್ಟು 738 ಮಂದಿ ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 26,850ಕ್ಕೂ ಹೆಚ್ಚು ಮುಖವಾಡ ಉಲ್ಲಂಘನೆ ಪ್ರಕರಣಗಳು ವರದಿಯಾಗಿದ್ದು, 28,14,235 ರೂ.ಗಳನ್ನು ಅಧಿಕಾರಿಗಳು ದಂಡ ರೂಪಾದಲ್ಲಿ ವಸೂಲಿ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಕೊರೋನಾ ವರದಿ:
ಜಿಲ್ಲೆಯಲ್ಲಿ ಶನಿವಾರ 10 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 23,254ಕ್ಕೆ ಏರಿಕೆಯಾಗಿದೆ. ಈ ಪೈಕಿ 30 ಪ್ರಕರಣಗಳು ಸದ್ಯ ಸಕ್ರೀಯವಾಗಿವೆ.
ಇದುವರೆಗೆ 3,28,215 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವುಗಳಲ್ಲಿ 3,04,961 ನೆಗೆಟಿವ್ ವರದಿ ಲಭ್ಯವಾಗಿದೆ. ಶನಿವಾರ 7 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 189 ಸಾವುಗಳು ಸಂಭವಿಸಿವೆ.