ಕೋಲ್ಕತಾ, ಜ. 23 (DaijiworldNews/SM): ದೇಶಕ್ಕೆ ಪ್ರತ್ಯೇಕ ನಾಲ್ಕು ರಾಜಧಾನಿಗಳನ್ನು ನಿರ್ಮಿಸಬೇಕು. ಕೊಲ್ಕತ್ತಾವೂ ಕೂಡ ಅವುಗಳಲ್ಲಿ ಒಂದಾಗಬೇಕು ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಕೊಲ್ಕತ್ತಾಗೆ ತೆರಳಿದ್ದು ಈ ವೇಳೆ ಮಮತಾ ಅವರು ಈ ಬೇಡಿಕೆಯನ್ನು ಪ್ರಧಾನಿಗಳ ಮುಂದಿರಿಸಿದ್ದಾರೆ.
"ಬ್ರಿಟಿಷರು ಕೋಲ್ಕತ್ತಾದಿಂದ ಇಡೀ ದೇಶವನ್ನು ಆಳಿದರು. ಈ ನಮ್ಮ ದೇಶದಲ್ಲಿ ಒಂದೇ ರಾಜಧಾನಿ ಏಕೆ ಇರಬೇಕು? ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮದಲ್ಲಿ ನಾಲ್ಕು ರಾಷ್ಟ್ರೀಯ ರಾಜಧಾನಿಗಳು ಏಕೆ ಇರಬಾರದು? ದೇಶದಲ್ಲಿ ನಾಲ್ಕು ರಾಷ್ಟ್ರ ರಾಜಧಾನಿಗಳನ್ನು ಮಾಡಬೇಕು ಎಂದು ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.