ಚಿತ್ರದುರ್ಗ,ಜ.23 (DaijiworldNews/HR): "ಜೊತೆಗಿದ್ದ ಸ್ನೇಹಿತರೆಲ್ಲರೂ ಬಿಟ್ಟು ಹೋಗಿ ಸಚಿವರಾದರು, ನಾನು ಗಟ್ಟಿಧ್ವನಿಯಲ್ಲಿ ಮಾತನಾಡಿ ಒಬ್ಬಂಟಿಯಾದೆ. ಆದರೆ ಕರ್ನಾಟಕದ ಜನರು ನನ್ನ ಜೊತೆಗಿದ್ದಾರೆ" ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮುಂಬೈಗೆ ತೆರಳಿದ 17 ಜನರ ತಂಡವನ್ನು ನಾನು ಮುನ್ನೆಡಿಸಿದ್ದು, ಮಂತ್ರಿಯಾಗಬೇಕು ಎಂಬ ಉದ್ದೇಶದಿಂದ ಬಿಜೆಪಿಗೆ ಬಂದಿಲ್ಲ. ಸಚಿವ ಸ್ಥಾನವನ್ನು ಮತ್ತೆ ಕೇಳುವುದಿಲ್ಲ. ರಾಜ್ಯದಲ್ಲಿ ಗಟ್ಟಿ ಧ್ವನಿ ಕೇಳಿಸುತ್ತದೆ ಹೊರತು ಹೇಡಿ ಧ್ವನಿಯಲ್ಲ" ಎಂದರು.
ಇನ್ನು ಖಾತೆ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, "ಕೊರೊನಾ ಲಸಿಕೆ ನೀಡುವ ಸಂದರ್ಭದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಡಾ.ಸುಧಾಕರ್ ಕೈಯಲ್ಲಿದ್ದರೆ ಅನುಕೂಲವಾಗುತ್ತಿತ್ತು. ಪರಿಸರ ಮತ್ತು ಅರಣ್ಯ ಖಾತೆಯನ್ನು ಬೇರ್ಪಡಿಸಿರುವುದು ಕೂಡ ಅಸಮಧಾನವಾಗಿದೆ" ಎಂದು ಹೇಳಿದ್ದಾರೆ.