ದಿಸ್ಪುರ,ಜ.23 (DaijiworldNews/HR): ಪ್ರಧಾನಿ ನರೇಂದ್ರ ಮೋದಿಯವರು ಅಸ್ಸಾಂನ ಶಿವಸಾಗರ್ ಜಿಲ್ಲೆಯ ಜೆರೆಂಗಾ ಪತಾರ್ ಮೈದಾನದಲ್ಲಿ 1.6 ಲಕ್ಷ ಕುಟುಂಬಗಳಿಗೆ ಭೂ ದಾಖಲೆ ಹಸ್ತಾಂತರಿಸಿದ್ದಾರೆ.
ಬಳಿಕ ಮಾತನಾಡಿದ ಅವರು, "ದೇಶದ ಜನರ ಅಸ್ತಿತ್ವ ಮತ್ತು ಸಂಸ್ಕೃತಿಯನ್ನು ಕಾಪಾಡಲು ಕೇಂದ್ರದ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಂಡಿದೆ" ಎಂದರು.
ಇನ್ನು "ಭೂ ದಾಖಲೆಗಳು ಇಲ್ಲಿನ ಸಹೋದರ ಸಹೋದರಿಯರ ದೊಡ್ಡ ಸಮಸ್ಯೆಯನ್ನು ನಿವಾರಿಸಲಿದ್ದು, ಭೂ ದಾಖಲೆಗಳು ಈಗ ಕೈಯಲ್ಲಿರುವ ಕಾರಣ ರೈತರಿನ್ನು ಸರ್ಕಾರದ ಎಲ್ಲ ಯೋಜನೆಗಳ ಪ್ರಯೋಜನ ಪಡೆಯಬಹುದು. ಬ್ಯಾಂಕ್ನಿಂದ ಸಾಲವನ್ನೂ ಪಡೆಯಬಹುದು" ಎಂದು ಹೇಳಿದ್ದಾರೆ.