ಕೋಲ್ಕತಾ,ಜ.23 (DaijiworldNews/HR): "ಹೊಸ ಸಂಸತ್ ಕಟ್ಟಡ ನಿರ್ಮಿಸುತ್ತಿದ್ದೀರಿ, ನೂತನ ವಿಮಾನ ಖರೀದಿಸುತ್ತಿದ್ದೀರಿ ಆದರೆ ಇನ್ನೂ ಕೂಡ ನೇತಾಜಿ ಸ್ಮಾರಕವನ್ನು ಯಾಕೆ ನಿರ್ಮಿಸಿಲ್ಲ" ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮಮತಾ ಬ್ಯಾನರ್ಜಿ, "ನೀವು ಯಾವುದೇ ಬಂದರು ಪ್ರದೇಶಕ್ಕೆ ಶ್ಯಾಮ್ ಪ್ರಸಾದ್ ಮುಖರ್ಜಿ ಹೆಸರನ್ನು ಕೊಡಿ, ನಮ್ಮದೇನು ಆಕ್ಷೇಪವಿಲ್ಲ, ಆದರೆ ನೇತಾಜಿಯವರ ಸ್ಮಾರಕ ಇನ್ನೂ ನಿರ್ಮಿಸಿಲ್ಲ. ಅಷ್ಟೆ ಅಲ್ಲದೆ ನೇತಾಜಿ ಜನ್ಮ ದಿನಾಚರಣೆಯನ್ನು ಇನ್ನೂ ರಾಷ್ಟ್ರೀಯ ರಜಾ ದಿನವೆಂದು ಘೋಷಿಸಿಲ್ಲ" ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು "ನೇತಾಜಿ ಅವರ ಜನ್ಮ ದಿನವನ್ನು 'ಪರಾಕ್ರಮ್ ದಿವಸ್' ಎಂದು ಕೇಂದ್ರ ಸರ್ಕಾರ ಹೆಸರಿಸಿದ್ದು, ಪರಾಕ್ರಮ್ ದಿವಸ್ ಅರ್ಥವೇನು? ನಮಗೆ ಇಂದು ದೇಶನಾಯಕ್ ದಿವಸವಾಗಬೇಕಾಗಿದೆ. ನಿಮ್ಮ ಕ್ರಮ ಸರಿಯಾದುದಲ್ಲ, ನಾವು ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ" ಎಂದು ಹೇಳಿದ್ದಾರೆ.