ಕಾಸರಗೋಡು, ಜ.23 (DaijiworldNews/MB) : ಹಾಡಹಗಲೇ ವ್ಯಕ್ತಿಯ ಥಳಿಸಿ ಕೊಲೆಗೈದಿರುವ ಘಟನೆ ಕಾಸರಗೋಡು ನಗರದ ಆಸ್ಪತ್ರೆ ಪರಿಸರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಮೃತ ವ್ಯಕ್ತಿಯನ್ನು ಚೆಮ್ನಾಡ್ ದೇಳಿಯ ಮುಹಮ್ಮದ್ ರಫೀಕ್ (45) ಎಂದು ಗುರುತಿಸಲಾಗಿದೆ.
ರಫೀಕ್ ಆಸ್ಪತ್ರೆಯ ಸಮೀಪವಿರುವ ಮೆಡಿಕಲ್ನಲ್ಲಿ ಔಷಧಿ ಖರೀದಿಸುತ್ತಿದ್ದಾಗ, ಗ್ಯಾಂಗ್ ಇದ್ದಕ್ಕಿದ್ದಂತೆ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿತು. ಅವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಆಸ್ಪತ್ರೆಯಲ್ಲಿ ವೈದ್ಯರು ರಫೀಕ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ. ಹಲ್ಲೆಕೋರರನ್ನು ಬಂಧಿಸಲು ಹತ್ತಿರದ ಕಟ್ಟಡಗಳ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗುತ್ತಿದೆ. ಮೃತರ ಪಾರ್ಥಿವ ಶರೀರವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.