ಉಡುಪಿ, ಜ.23 (DaijiworldNews/HR): ಉಡುಪಿಯ ಪ್ರತಿಯೊಬ್ಬ ನಾಗರಿಕನಿಗೂ ನಿನ್ನೆಯಿಂದ ಕಾಡುತ್ತಿರುವ ಪ್ರಶ್ನೆಯೆಂದರೆ ಉಡುಪಿ ಜಿಲ್ಲೆಗೆ ಸಚಿವ ಎಸ್ ಅಂಗಾರ ಉಸ್ತುವಾರಿಯಾಗ್ತಾರಾ? ಎಂಬುದು. ಜನವರಿ 26ರ ಗಣರಾಜ್ಯಕ್ಕೆ 29 ಜಿಲ್ಲೆಗೆ ಯಾರ್ಯಾರು ದ್ವಜಾರೋಹಣ ಮಾಡಬೇಕೆಂಬ ಪಟ್ಟಿಯೂ ಬಿಡುಗಡೆಯಾಗಿದೆ. ಅದರಂತೆ ಉಡುಪಿ ಜಿಲ್ಲೆಗೆ ಎಸ್ ಅಂಗಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವ ಕೋಟ ಪೂಜಾರಿಯರಿಯವರು, ಹಾಗೂ ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿಯವರು ದ್ವಜಾರೋಹಣ ಮಾಡುತ್ತಿದ್ದಾರೆ. ಈಗಾಗಲೇ ಮೂರು ಜಿಲ್ಲೆಗೆ ಉಸ್ತುವಾರಿಯಾಗಿರುವ ಬೊಮ್ಮಾಯಿಗೆ ಹೆಚ್ಚುವರಿಯಾಗಿ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ಸಚಿವರಾಗಿ ಜವಾಬ್ದಾರಿ ನಿಬಾಯಿಸಬೇಕಾಗಿದೆ.
ಈಗ ಎಲ್ಲರ ಕಣ್ಣು ನೆಟ್ಟಿರುವುದು, ಕುತೂಹಲ ಮೂಡಿಸಿರುವುದು ಇದೇ ಪಟ್ಟಿ. ಮುಂದೆ ಏನಾದರೂ ಜಿಲ್ಲಾ ರಾಜಕೀಯದಲ್ಲಿ ಬದಲಾವಣೇ ಆಗಲಿದೆಯಾ? ಎನ್ನುವುದು ಪ್ರಶ್ನೆ.
ಅನೇಕ ಸಮಯದ ನಂತರ ಉಡುಪಿಯ ಜಿಲ್ಲೆಯ ಸಚಿವರೇ ಉಡುಪಿಯ ಉಸ್ತುವಾರಿ ಆಗಬೇಕೆಂಬುದು ಎಲ್ಲಾ ಜನತೆಯ ಇಂಗಿತವೂ ಆಗಿತ್ತು. ಆದರೆ ಪಕ್ಷದೊಳಗಿನ ರಾಜಕೀಯದಿಂದಲೇ ಕೋಟ ಶ್ರೀನಿವಾಸ ಪೂಜಾರಿಯವರನ್ನು ದಕ್ಷಿಣ ಕನ್ನಡದ ಉಸ್ತುವಾರಿಯನ್ನಾಗಿ ಮಾಡಲಯಿತು. ಬಹುತೇಕ ಟೀಕೆಗಳನ್ನು ಕೂಡ ಮಾಡಿದ್ದರು ಜನ. ಆದರೂ ಬಿಜೆಪಿ ಸೊಪ್ಪು ಹಾಕಲಿಲ್ಲ. ತದನಂತರ ಉಡುಪಿ ಉಸ್ತುವಾರಿಯಾಗಿ ಬಸವರಾಜು ಬೊಮ್ಮಾಯಿಯವರನ್ನು 2019 ಆಯ್ಕೆ ಮಾಡಲಾಯಿತು. ಇದರಿಂದ ಉಡುಪಿಯ ಜನರಿಗೆ ತುಂಬಾ ನಿರಾಸೆಯಾಗಿದ್ದು ಸುಳ್ಳಲ್ಲ. ಹಾಗಾದರೆ ಕರಾವಳಿಯಲ್ಲಿ ಯಾವ ಶಾಸಕರರುಗಳು ಉಸ್ತುವಾರಿಯಾಗಲು ಅರ್ಹರಿಲ್ಲವೇ ಎಂಬ ಪ್ರಶ್ನೆ ಮೂಡಿತ್ತು ಕೂಡ. ಇಂದಿಗೂ ನಮ್ಮವರು ಎನ್ನುವ ಸಚಿವರು ಉಡುಪಿಗಿಲ್ಲ ಎನ್ನುವ ಅಸಮಧಾನ ಬಹುವಾಗಿದೆ.
ಇನ್ನು ಗೃಹ ಮಂತ್ರಿ ಸ್ಥಾನದಲ್ಲಿರುವ ಉಡುಪಿ ಉಸ್ತುವಾರಿ ಸಚಿವರು ಬಸವರಾಜು ಬೊಮ್ಮಾಯಿ ಉಡುಪಿಯ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿರುವುದು ಬಲು ಅಪರೂಪ. ರಾಜ್ಯ ಸಚಿವರುಗಳು, ಪಕ್ಷದ ಕಾರ್ಯಕ್ರಮದಲ್ಲಿ ಮಾತ್ರ ಉಪಸ್ಥಿತಿ ಕಾಣಸಿಗುತ್ತದೆ. ಅದನ್ನು ಹೊರತು ಪಡಿಸಿದರೆ ಕೊರೊನಾ ಪರಿಸ್ಥಿತಿಯಲ್ಲಿ ಜಿಲ್ಲಾಧಿಕಾರಿಯವರೇ ಉಸ್ತುವಾರಿ ಸ್ಥಾನದಲ್ಲಿ ಕೂತು ಪರಿಸ್ಥಿತಿ ನಿಬಾಯಿಸಿದರು. ತದನಂತರ ಮಳೆಗಾಲದಲ್ಲಿ ವಿಕೋಪ ಆದಾಗ ಅಲ್ಲಲ್ಲಿ ತಿರುಗಾಡಿದ್ದು ಹೊರತು ಪಡಿಸಿ, ರಾಜ್ಯದ ಗೃಹ ಮಂತ್ರಿಯಾಗಿ ಜವಾಬ್ದಾರಿಯೇ ನಿಬಾಯಿಸಿದ್ದೇ ಹೆಚ್ಚು. ಹಾಗಾಗಿ ಜಿಲ್ಲೆಯ ಜನರ ಕೈಗೆ ಉಸ್ತುವಾರಿಗಳು ಸಿಗುತ್ತಿಲ್ಲ, ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳೇ ಹೆಚ್ಚು ಎಂದರೂ ತಪ್ಪಿಲ್ಲ.
ಸರಕಾರ ರಚನೆಯಾಗಿ ಈಗಾಗಲೇ ಎರಡು ವರ್ಷ ಕಳೆದೆರೂ, ಉಪಚುನಾವಣೆಯಾಗಿ ಸಚಿವ ಸಂಪುಟ ವಿಸ್ತರಣೆ ಇತ್ತೀಚಗಷ್ಟೇ ಆಗಿದೆ. ಎಲ್ಲ ನೂತನ ಸಚಿವರು ಪ್ರತಿಜ್ಞೆ ಸ್ವೀಕರಿಸಿ ಅಧಿಕಾರದ ಚುಕ್ಕಾಣಿ ಕೂಡ ಹಿಡಿದಿದ್ದಾರೆ. ಅದಾದ ನಂತರ ಪ್ರಥಮ ಸರಕಾರಿ ಕಾರ್ಯಕ್ರಮವೇ ಗಣರಾಜ್ಯೋತ್ಸವ. ಈಗಾಗಲೇ ಮೂರು ಜಿಲ್ಲೆಗೆ ಉಸ್ತುವಾರಿಯಾಗಿರುವ ಬೊಮ್ಮಾಯಿಗೆ ಹೆಚ್ಚುವರಿಯಾಗಿ ಕಾನೂನು ಸಂಸದೀಯ ವ್ಯವಹಾರ ಮತ್ತು ಶಾಸನ ಸಚಿವರಾಗಿ ಜವಾಬ್ದಾರಿ ನಿಬಾಯಿಸಬೇಕಾಗಿದೆ.
ಈಗ ಎಲ್ಲರ ಕಣ್ಣು ನೆಟ್ಟಿರುವುದು, ಕುತೂಹಲ ಮೂಡಿಸಿರುವುದು ಇದೇ ಗಣರಾಜ್ಯೋತ್ಸವದಲ್ಲಿ ದ್ವಜಾರೋಹಣ ಮಾಡಲಿರುವ ಪಟ್ಟಿ. ಎಸ್ ಅಂಗಾರವರು ದ.ಕ. ಜಿಲ್ಲೆಯ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರು. ಸತತ ಆರು ಬಾರಿ ಸುಳ್ಯದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜನಸ್ನೇಹಿ ಆಡಳಿತವನ್ನು ನಡೆಸಿಕೊಂಡು ಸರಳ ಸಜ್ಜನಿಕೆ ವ್ಯಕ್ತಿ ಎಂದೂ ಹೆಸರು ಪಡೆದಿದ್ದಾರೆ. ಸತತ 32 ವರ್ಷಗಳಿಂದಲೂ ರಾಜಕೀಯ ಕ್ಷೇತ್ರದಲ್ಲಿದ್ದು ತಾನೂ ಸಚಿವಾಕಾಂಕ್ಷಿಯಾಗಿರದೆ ಜನಸೇವೆ ಮಾಡಿಕೊಂಡಿದ್ದ್ರರು. ದಲಿತ ಸಮುದಾಯದ ನಾಯಕನಾದರೂ ಅವರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಒತ್ತಾಯವೇ ಹೆಚ್ಚು. ಉಸ್ತುವಾರಿಯವರ ಬದಲಿಗೆ ಮೀನುಗಾರಿಗೆ, ಒಳನಾಡು ಮತ್ತು ಬಂದರು ಇಲಾಖೆಯ ಸಚಿವರಾದ ಮೇಲೆ ಪ್ರಥಮ ಬಾರಿಗೆ ಎಸ್ ಅಂಗಾರವರು ಜ. 26ಕ್ಕೆ ಉಡುಪಿಗೆ ಬರಲಿದ್ದಾರೆ. ಇದರೊಂದಿಗೆ ಅವರೇ ಮುಂದೆ ಉಡುಪಿಯ ಉಸ್ತುವಾರಿ ಆಗ್ತಾರಾ ಅನ್ನುವ ಪ್ರಶ್ನೆಯೂ ಎಲ್ಲರಲ್ಲಿ ಮೂಡಿದ್ದಂತೂ ಸುಳ್ಳಲ್ಲ ಎನ್ನಲಾಗಿದೆ.