ಬೆಳಗಾವಿ,ಜ.23 (DaijiworldNews/HR): ಕನ್ನಡ ಧ್ವಜ ತೆರವುಗೊಳಿಸಬೇಕೆಂದು ಬೆಳಗಾವಿ ಗಡಿಯಲ್ಲಿ ಪ್ರತಿಭಟನೆಗೆ ಯತ್ನಿಸಿ ಪುಂಡಾಟ ನಡೆಸಿದ್ದ ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಶಿವಸೇನೆಯ ಎಂಟು ಕಾರ್ಯಕರ್ತರ ವಿರುದ್ಧ ವಿರುದ್ಧ ಬೆಳಗಾವಿ ಪೋಲೀಸರು ಕಾಕತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಎದುಗಡೆಯಲ್ಲಿ ಹಾಕಿದ್ದ ಕನ್ನಡ ಧ್ವಜ ತೆರವುಗೊಳಿಸಲು ಒತ್ತಾಯಿಸಿ ಮಹಾರಾಷ್ಟ್ರದಿಂದ ಬೆಳಗಾವಿ ಗಡಿ ಪ್ರವೇಶಿಸಲು ಯತ್ನಿಸುತ್ತಿದ್ದ ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ತಡೆಯುತ್ತಿದ್ದಾಗ ನೂಕಾಟ-ತಳ್ಳಾಟ ಗುರುವಾರದಂದು ನಡೆದಿತ್ತು.