ಮಂಗಳೂರು, ಜ.23 (DaijiworldNews/MB) : ''ಮರಳು ತುಂಬಿದ ಗಾಡಿ ವಶಕ್ಕೆ ಪಡೆಯುತ್ತಾರೆ ಆದರೆ ಸ್ಪೋಟಕ ಸಾಗಿಸುವವರನ್ನು ಯಾಕೆ ಹಿಡಿಯಲ್ಲ'' ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿನ ಸ್ಪೋಟಕ ವಿಚಾರವಾಗಿ ಶನಿವಾರ ಮಾತನಾಡಿದ ಅವರು, ''ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಕಾನೂನು ವ್ಯವಸ್ಥೆ ಇಲ್ಲವೇ. ಅಷ್ಟಕ್ಕೂ ಲಾರಿಯಲ್ಲಿ ಸ್ಪೋಟಕ ವಸ್ತು ಸಾಗಿಸುತ್ತಿರುವ ವಿಚಾರ ಅಧಿಕಾರಿಗಳಿಗೆ ತಿಳಿದ್ದಿಲ್ಲವೇ'' ಎಂದು ಕೇಳಿದ್ದಾರೆ.
''ಶಿವಮೊಗ್ಗ ಜಿಲ್ಲೆಯ ಜನರ ಮೇಲೆ ಈ ಗಣಿಗಾರಿಕೆಯು ಪರಿಣಾಮ ಬೀರುತ್ತಿದೆ. ಸರ್ಕಾರ ಈ ಘಟನೆಯಲ್ಲಿ ಯಾರೆಲ್ಲಾ ಮನೆಗೆ ಹಾನಿಯಾಗಿದೆ ಅವರಿಗೆ ಪರಿಹಾರ ನೀಡಬೇಕು'' ಎಂದು ಖಾದರ್ ಒತ್ತಾಯಿಸಿದ್ದಾರೆ.
''ಗಣಿಗಾರಿಕೆ ಅಧಿಕಾರಿಯನ್ನು ಈ ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಸರ್ಕಾರ ಯಾಕೆ ಈ ಬಗ್ಗೆ ತನಿಖೆ ನಡೆಸಲು ಹಿಂದೇಟು ಹಾಕಿದೆ'' ಎಂದು ಕಿಡಿಕಾರಿದ್ದಾರೆ.