ನವದೆಹಲಿ,ಜ.23 (DaijiworldNews/HR): "ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ದಾಳಿಯಿಂದ ತಮಿಳುನಾಡು ಸಂಸ್ಕೃತಿಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇನೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಮೂರು ದಿನಗಳ ತಮಿಳುನಾಡು ಪ್ರವಾಸ ಇಂದಿನಿಂದ ಆರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ದಾಳಿಯಿಂದ ತಮಿಳುನಾಡು ಸಂಸ್ಕೃತಿಯನ್ನು ರಕ್ಷಿಸಲು ಬದ್ಧರಾಗಿದ್ದೇವೆ" ಎಂದು ತಿಳಿಸಿದ್ದಾರೆ.
ಇನ್ನು "ಜಲ್ಲಿಕಟ್ಟು ಗ್ರಾಮೀಣ ಕ್ರೀಡೆಯಲ್ಲಿ ಭಾಗವಹಿಸಿ ಇದೀಗ ಮತ್ತೊಮ್ಮೆ ತಮಿಳುನಾಡಿಗೆ ಹಿಂತಿರುಗಲು ನನಗೆ ಸಂತಸವಾಗುತ್ತಿದೆ, ಕೊಂಗು ನಾಡಿನ ನನ್ನ ತಮಿಳು ಸಹೋದರ ಹಾಗೂ ಸಹೋದರಿಯೊಂದಿಗೆ ಸಮಯ ಕಳೆಯಲಿದ್ದೇನೆ. ನಾವೆಲ್ಲರೂ ಒಟ್ಟಾಗಿ, ನರೇಂದ್ರ ಮೋದಿ ಸರ್ಕಾರದ ದಾಳಿಯಿಂದ ತಮಿಳರ ವಿಶಿಷ್ಟ ಸಂಸ್ಕೃತಿಯನ್ನು ರಕ್ಷಿಸಲಿದ್ದೇವೆ" ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.