ಚೆನ್ನೈ, ಜ.23 (DaijiworldNews/HR): ತಮಿಳುನಾಡಿನ ಮುದುಮಲೈ ಹುಲಿ ಅಭಯಾರಣ್ಯ ಪ್ರದೇಶದ ಮಾಸಿನಗುಡಿಯಲ್ಲಿ ಆನೆಗೆ ಬೆಂಕಿ ಹಚ್ಚಿದ್ದು, ನೋವು ತಾಳಲಾರದೆ ಗಜರಾಜ ಪ್ರಾಣಬಿಟ್ಟ ಘಟನೆ ನಡೆದಿದೆ.
ಆನೆಯನ್ನು ಓಡಿಸುವುದಕ್ಕಾಗಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಬಟ್ಟೆಗಳನ್ನು ಎಸೆದಿದ್ದು, ಹೊತ್ತಿ ಉರಿಯುತ್ತಿರುವ ಬಟ್ಟೆಯು ಆನೆಯ ಕಿವಿಯಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಸುಟ್ಟ ಗಾಯಗಳಾಗಿದ್ದು, ಕೊನೆಗೆ ನೋವು ತಾಳಲಾರದೆ ಮೂರು ದಿನಗಳ ಬಳಿಕ ಆನೆ ಪ್ರಾಣ ಕಳೆದುಕೊಂಡಿದೆ.
ಇನ್ನು ಸುಟ್ಟ ಗಾಯಗಳೊಂದಿಗೆ ಆನೆ ಕಾಡಿನತ್ತ ಓಡಿ ಹೋಗಿಸ್ಸು, ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ.
ಈ ಘಟನೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದ್ದು, ಮೂರನೇ ವ್ಯಕ್ತಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.