ಬೆಂಗಳೂರು, ಜ.23 (DaijiworldNews/HR): ಕೋಟ್ಯಾಂತರ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಯುವರಾಜ್ ಎಂಬಾತನ ಆಸ್ತಿ ಜಪ್ತಿಗೆ ಬೆಂಗಳೂರಿನ ಸಿಸಿಹೆಚ್ 67ನೇ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.
ಆರೋಪಿ ಯುವರಾಜ್ ಬೆಂಗಳೂರು ಉತ್ತರ, ಹಾಸನ, ಮದ್ದೂರು, ದ್ವಾರ ಕೊತ್ತನಹಳ್ಳಿಯಲ್ಲಿ ನಿವೇಶನಗಳು ಮತ್ತು ಮನೆಗಳು, ಜಮೀನು ಸೇರಿ ಒಟ್ಟು 26 ಆಸ್ತಿ ಜಪ್ತಿಮಾಡಲು ಕೋರ್ಟ್ ಆದೇಶ ಹೊರಡಿಸಿದೆ.
ಆರೋಪಿ ಯುವರಾಜ್ ರಾಜ್ಯಪಾಲರ ಹುದ್ದೆ, ಸರ್ಕಾರಿ ನೌಕರಿ, ಮೆಡಿಕಲ್ ಸೀಟ್, ನಿಗಮ-ಮಂಡಳಿಗಳಿಗೆ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ವಂಚಿಸಿ ಕೋಟ್ಯಾಂತರ ರೂಪಾಯಿ ಪಡೆದುಕೊಂಡಿದ್ದು, ಈತನ ವಿರುದ್ಧ ಹಲವು ನಗರ ಪೊಲೀಸ್ ಠಾಣೆಗಳಲ್ಲಿ 14 ಪ್ರಕರಣಗಳು ದಾಖಲಾಗಿದವೆ.
ಇನ್ನು ಆರೋಪಿ ಯುವರಾಜ್ಗೆ ಸೇರಿದ ಸುಮಾರು 80 ರಿಂದ 90 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಆಗಲಿದ್ದು, ಯುವರಾಜ್ ಜೊತೆ ಆತನ ಪತ್ನಿ ಆಸ್ತಿ ಕೂಡ ಜಪ್ತಿ ಆಗಲಿದೆ ಎನ್ನಲಾಗಿದೆ.