ಬಂಟ್ವಾಳ, ಜ.23 (DaijiworldNews/MB) : ಕಳ್ಳರು ನಾವೂರು ಗ್ರಾಮದ ಫರ್ಲ ಚರ್ಚಿಗೆ ನುಗ್ಗಿ ಹಣಕ್ಕಾಗಿ ಹುಡುಕಾಡಿ ಪವಿತ್ರ ವಸ್ತುಗಳಿಗೆ ಹಾನಿಗೈದಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಕಳ್ಳರು ಚರ್ಚಿನ ಬಾಗಿಲನ್ನು ಮುರಿದು ಒಳಕ್ಕೆ ನುಗ್ಗಿ ಹಣಕ್ಕಾಗಿ ಹುಡುಕಾಡಿದ್ದಾರೆ. ಕಳ್ಳರು ಚರ್ಚಿನೊಳಗೆ ನುಗ್ಗುವ ದೃಶ್ಯವು ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಕಳ್ಳರ ಗುರುತು ಪತ್ತೆಯಾಗಿಲ್ಲ ಎಂದು ಮಾಹಿತಿ ದೊರೆತಿದೆ.
ಚರ್ಚಿನಲ್ಲಿದ್ದ ಪವಿತ್ರ ವಸ್ತುಗಳಿಗೆ ಕಳ್ಳರು ಹಾನಿಗೈದಿದ್ದಾರೆ. ಇನ್ನು ಚರ್ಚಿನಲ್ಲಿ ಹಣವಿಡದೇ ಇರುವ ಕಾರಣದಿಂದ ಕಳ್ಳರು ಬರಿಗೈಯಲ್ಲೇ ಹಿಂದಿರುಗಿರಬಹುದು ಎಂದು ಹೇಳಲಾಗಿದೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.