ಮಥುರಾ, ಜ.23 (DaijiworldNews/MB) : ''ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ರಾಮ ಮಂದಿರದಲ್ಲಿ ರಾವಣನ ಪ್ರತಿಮೆಯನ್ನು ಕೂಡಾ ನಿರ್ಮಿಸಬೇಕು'' ಎಂದು ಆಗ್ರಹಿಸಿ ಲಂಕೇಶ್ ಭಕ್ತ ಮಂಡಳಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ.
''ರಾಮ ಮಂದಿರದಲ್ಲೇ ಈ ರಾವಣನ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು. ಈ ಪ್ರತಿಮೆ ನಿರ್ಮಾಣಕ್ಕೆ ಆಗುವ ಖರ್ಚು ವೆಚ್ಚಗಳನ್ನು ಲಂಕೇಶ್ ಭಕ್ತ ಮಂಡಳಿಯೇ ನೀಡಲಿದೆ'' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಅಧ್ಯಕ್ಷರಿಗೆ ಮಂಡಳಿಯಿಂದ ಬರೆದಿರುವ ಪತ್ರದಲ್ಲಿ ಮಂಡಳಿಯ ಅಧ್ಯಕ್ಷ ಓಂವೀರ್ ಸಾರಸ್ವತ್ ಅವರು ಹೇಳಿದ್ದಾರೆ.