ಮಂಗಳೂರು, ಜ.22 (DaijiworldNews/HR): ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಜಿಲ್ಲೆಯಲ್ಲಿ ಶುಕ್ರವಾರ 12 ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ.
ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳು 33,530ಕ್ಕೆ ಏರಿಕೆಯಾಗಿವೆ. ಈ ಪೈಕಿ 252 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ.
ಇನ್ನು ಜಿಲ್ಲೆಯಲ್ಲಿ ಒಟ್ಟು 5,71,140 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 4,73,610 ಮಂದಿಯ ವರದಿ ನೆಗೆಟಿವ್ ಆಗಿದೆ.
ಶುಕ್ರವಾರ 28 ಜನರನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಜಿಲ್ಲೆಯಲ್ಲಿ ಇಂದು ಓರ್ವ ಮೃತಪಟ್ಟಿದ್ದು, ಈವರೆಗೆ ಒಟ್ಟು 738 ಸಾವುಗಳು ಸಂಭವಿಸಿವೆ.