ಪುಣೆ, ಜ.22 (DaijiworldNews/HR): ಸೀರಂ ಇನ್ಸ್ಟಿಟ್ಯೂಟ್ನಲ್ಲಿ ನಡೆದ ಅಗ್ನಿ ಅವಘಡ ಕುರಿತು ತನಿಖೆ ನಡೆಸಲು ಮೂರು ಪ್ರತ್ಯೇಕ ಸಂಸ್ಥೆಗಳು ಒಟ್ಟಾಗಲಿದ್ದು, ಅಗ್ನಿ ಅವಘಡದ ಹಿಂದಿನ ಕಾರಣಗಳನ್ನು ತಿಳಿಯಲು ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ.
ಪುಣೆ ನಗರಸಭೆಯ ಅಗ್ನಿಶಾಮಕ ಇಲಾಖೆ, ಪುಣೆ ಮಹಾನಗಗರ ವಲಯ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ ಜಂಟಿ ತನಿಖೆಯನ್ನು ನಡೆಸಲಿವೆ.
ಸೀರಂ ಇನ್ಸ್ಟಿಟ್ಯೂಟ್ ಆವರಣದಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಐವರು ಗುತ್ತಿಗೆ ನೌಕರರು ಮೃತಪಟ್ಟಿದ್ದು, ಎರಡು ಮಹಡಿಯಲ್ಲಿ ಅವಘಡದ ಪರಿಣಾಮ ತೀವ್ರವಾಗಿತ್ತು.
ಇನ್ನು ಪಿಎಂಆರ್ಡಿಎ ಮುಖ್ಯ ಅಗ್ನಿಶಾಮಕ ಅಧಿಕಾರಿ ದೇವೇಂದ್ರ ಪೋಟ್ಪೊಡೆ ಅವರು, "ದುರಂತದ ಹಿಂದಿನ ಕಾರಣ ತಿಳಿಯಲು ಮೂರು ಸಂಸ್ಥೆಗಳು ಒಟ್ಟಾಗಿ ತನಿಖೆ ನಡೆಸುತ್ತಿವೆ" ಎಂದು ತಿಳಿಸಿದ್ದಾರೆ.