ಮುಂಬೈ,ಜ.22 (DaijiworldNews/HR): ಭಾರತದ ಸೀರಂ ಇನ್ಸ್ಟಿಟ್ಯೂಟ್ನಲ್ಲಿ ತಯಾರಿಸಲಾಗಿರುವ ಕೋವಿಶೀಲ್ಡ್ ಕೊರೊನಾ ಲಸಿಕೆಯನ್ನು ಮಾರಿಷಸ್ ಹಾಗೂ ಸೇಶೆಲ್ಸ್ ದೇಶಗಳಿಗೆ ಕೇಂದ್ರ ಸರ್ಕಾರ ರವಾನಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ ಅವರು ಕೋವಿಶೀಲ್ಡ್ ಲಸಿಕೆ ಸೀರಂ ಇನ್ಸ್ಟಿಟ್ಯೂಟ್ನಿಂದ ರವಾನೆಯಾಗುತ್ತಿರುವ ಚಿತ್ರಗಳನ್ನು ಟ್ವೀಟ್ ಮೂಲಕ ಪ್ರಕಟಿಸಿದ್ದಾರೆ.
ಇನ್ನು ಭಾರತೀಯ ನೌಕಾಪಡೆಯ ಪಿ-8ಐ ವಿಮಾನದ ಮೂಲಕ ಕೊರೊನಾ ಲಸಿಕೆ ಕಳುಹಿಸಲಾಗಿದ್ದು, ಮಾರಿಷಸ್ಗೆ 1 ಲಕ್ಷ ಡೋಸ್ಗಳಷ್ಟು ಕೊರೊನಾ ಲಸಿಕೆ ಹಾಗೂ ಸೇಶೆಲ್ಸ್ಗೆ 50,000 ಡೋಸ್ಗಳಷ್ಟು ಲಸಿಕೆ ಪೂರೈಸಲಾಗುತ್ತದೆ.