ಶಿರಸಿ, ಜ.22 (DaijiworldNews/PY): "ಸಕ್ಕರೆ ಖಾತೆ ಹಿಂಪಡೆದ ವಿಚಾರವಾಗಿ ನನಗೆ ಬೇಸರವಿಲ್ಲ. ಖಾತೆ ನೀಡುವುದು ಹಾಗೂ ಹಿಂತೆಗೆದುಕೊಳ್ಳುವುದು ಸಿಎಂ ಅವರಿಗೆ ಬಿಟ್ಟ ವಿಚಾರ" ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಚಿವ ಸಂಪುಟ ವಿಸ್ತರಣೆ ನಿರಂತರವಾದ ಪ್ರಕ್ರಿಯೆಯಾಗಿದೆ. ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸುವ ಮುಖೇನ ಸರ್ಕಾರಕ್ಕೆ ಉತ್ತಮ ಹೆಸರು ತಂದುಕೊಡುವ ಮಂದಿಗೆ ಸಿಎಂ ಅವರು ಖಾತೆ ನೀಡಿದ್ದಾರೆ" ಎಂದರು.
"ನನಗೆ ಸಕ್ಕರ ಖಾತೆ ಹಿಂತೆದುಕೊಂಡ ಬಗ್ಗೆ ಬೇಸರವಿಲ್ಲ. ಖಾತೆ ನೀಡುವುದು ಹಾಗೂ ಹಿಂಪಡೆಯುವುದು ಸಿಎಂ ಅವರಿಗೆ ಬಿಟ್ಟ ವಿಚಾರವಾಗಿದೆ. ಸಿಎಂ ಅವರಿಗೆ ಪರಮಾಧಿಕಾರವಿದೆ" ಎಂದು ಹೇಳಿದರು.
"ಸಂಪುಟದಲ್ಲಿನ ಯಾವ ಸಚಿವರಿಗೂ ಕೂಡಾ ಅಸಮಾಧಾನವಿಲ್ಲ. ಸಚಿವ ಸ್ಥಾನ ದೊರಕದಿದ್ದರೂ ಕೂಡಾ ಬೇಜಾರಿಲ್ಲ. ಎಲ್ಲವನ್ನೂ ಪಕ್ಷದ ಹೈಕಮಾಂಡ್ ನಿಭಾಯಿಸುತ್ತಿದ್ದು, ಎಲ್ಲರೂ ಸಹ ಸಿಎಂ ಅವರೊಂದಿಗೆ ಸೇರಿ ಕಾರ್ಯ ನಿರ್ವಹಿಸಲಿದ್ದೇವೆ" ಎಂದು ತಿಳಿಸಿದರು.