ಮುಂಬೈ, ಜ.22 (DaijiworldNews/PY): "ಸಚಿವ ಧನಂಜಯ್ ಮುಂಡೆ ಅವರ ಮೇಲೆ ಅತ್ಯಾಚಾರ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದ ಮುಂಬೈ ಮೂಲದ ಮಹಿಳೆ ದೂರನ್ನ ಹಿಂತೆಗೆದುಕೊಂಡಿದ್ದಾರೆ" ಎಂದು ಅಧಿಕಾರಿಯೋರ್ವರು ಶುಕ್ರವಾರ ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ಅಧಿಕಾರಿಗಳಿಗೆ ತಿಳಿಸಿರುವ ಮಹಿಳೆ, "ಧನಂಜಯ್ ಮುಂಡೆ ವಿರುದ್ದವಾಗಿ ನೀಡಿದ್ದ ಹಿಂತೆಗೆದುಕೊಳ್ಳುತ್ತಿದ್ದೇನೆ" ಎಂದಿದ್ದಾರೆ.
"ದೂರು ಹಿಂತೆಗೆದುಕೊಂಡಿರುವುದಕ್ಕೆ ಮಹಿಳೆ ಯಾವುದೇ ಕಾರಣವನ್ನು ನೀಡಿಲ್ಲ" ಎಂದು ಪೊಲೀಸರು ಹೇಳಿದ್ದಾರೆ. ದೂರು ಹಿಂತೆಗೆದುಕೊಳ್ಳುವ ವಿಚಾರದ ಬಗ್ಗೆ ನೋಟರಿ ದೃಢೀಕರಣ ಪ್ರಮಾಣ ಪತ್ರ ಸಲ್ಲಿಸುವಂತೆ ದೂರುದಾರರಿಗೆ ಪೊಲೀಸರು ತಿಳಿಸಿದ್ದಾರೆ.
2006ರಲ್ಲಿ ವಿವಾಹವಾಗುವ ನೆಪದಲ್ಲಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮುಂಬೈ ಮೂಲದ ಮಹಿಳೆಯೊಬ್ಬರು ಜ.11ರಂದು ಸಾಮಾಜಿಕ ನ್ಯಾಯ ಸಚಿವ ಧನಂಜಯ್ ಮುಂಡೆ ವಿರುದ್ಧ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ ಸಂದರ್ಭ ಮಹಿಳೆ ಓಶಿಪುರ ಪೊಲೀಸ್ ಠಾಣೆಗೆ ತನ್ನ ಹೇಳಿಕೆಯನ್ನು ದಾಖಲಿಸಲು ಹೋಗಿದ್ದರು.
"ತನ್ನ ಆರೋಪ ಮಾಡುತ್ತಿರುವ ಮಹಿಳೆ ಹಾಗೂ ಅವರ ಸಹೋದರಿ ನನಗೆ ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ. 2020ರ ನವೆಂಬರ್ ತಿಂಗಳಿನಲ್ಲೇ ನಾನು ಈ ವಿಚಾರದ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಿದ್ದೆ"ಎಂದು ಧನಂಜಯ್ ಮುಂಡೆ ತಿಳಿಸಿದ್ದರು.
"ನಾನು 2003ರ ತನಕ ಮಹಿಳೆಯೊಂದಿಗೆ ಸಂಪರ್ಕದಲ್ಲಿದೆ. ನಮಗೆ ಇಬ್ಬರು ಮಕ್ಕಳಿದ್ದಾರೆ. ನಮ್ಮಿಬ್ಬರ ಸಂಬಂಧವನ್ನು ಮನೆಯವರೂ ಕೂಡಾ ಒಪ್ಪಿದ್ದರು" ಎಂದಿದ್ದರು.