ಬೆಂಗಳೂರು, ಜ.22 (DaijiworldNews/PY): "ಅಬಕಾರಿ ಖಾತೆಯಲ್ಲಿ ನಾನು ಮಾಡುವ ಕೆಲಸ ಏನಿಲ್ಲ. ಹಾಗಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಅಬಕಾರಿ ಖಾತೆ ಬೇಡ ಬೇರೆ ಖಾತೆ ನೀಡುವಂತೆ ಮನವಿ ಮಾಡಿದ್ದೇನೆ" ಎಂದು ನೂತನ ಅಬಕಾರಿ ಸಚಿವ ಎಂ.ಟಿ.ಬಿ ನಾಗರಾಜ್ ಹೇಳಿದರು.
ಸಚಿವ ಸುಧಾಕರ್ ಅವರ ನಿವಾಸದಲ್ಲಿ ಮಾತನಾಡಿದ ಅವರು, "ಅಬಕಾರಿ ಇಲಾಖೆಯಲ್ಲಿ ನಾನು ಮಾಡುವಂತ ಕೆಲಸ ಏನಿಲ್ಲ. ಹಾಗಾಗಿ ನನಗೆ ಅಬಕಾರಿ ಖಾತೆ ಬೇಡ. ಬೇರೆ ಖಾತೆ ನೀಡುವಂತೆ ಸಿಎಂ ಬಿಎಸ್ವೈ ಅವರಲ್ಲಿ ಮನವಿ ಮಾಡಿದ್ದೇನೆ. ಅವರು ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ" ಎಂದು ತಿಳಿಸಿದರು.
"ನಾನು ಹಿಂದಿನ ಸರ್ಕಾರದಲ್ಲಿ ವಸತಿ ಸಚಿವನಾಗಿದ್ದೆ. ಇದರಲ್ಲಿ ನನಗೆ ನಿವೇಶನ ನೀಡುವುದು, ಮನೆ ಕಟ್ಟಿಸಿ ಕೊಡುವುದು ಈ ರೀತಿಯಾದ ಕೆಲಸಗಳಿದ್ದವು. ಆದರೆ, ಅಬಕಾರಿ ಇಲಾಖೆಯಲ್ಲಿ ನಾನು ಮಾಡುವ ಕೆಲಸ ಏನಿಲ್ಲ. ಈ ಹಿನ್ನೆಲೆ ನನಗೆ ಅಬಕಾರಿ ಖಾತೆ ಬೇಡ ಎಂದು ಸಿಎಂ ಅವರಲ್ಲಿ ಹೇಳಿದ್ದೇನೆ" ಎಂದರು.
"ಅಬಕಾರಿ ಇಲಾಖೆಯು ಮದ್ಯವನ್ನು ಯಾವುದೋ ಕಂಪೆನಿಗಳಿಂದ ಖರೀದಿ ಮಾಡುತ್ತದೆ. ಬಳಿಕ ಹೋಲ್ಸೇಲ್ ದರದಲ್ಲಿ ಅಂಗಡಿಗಳಿಗೆ ಮಾರಾಟ ಮಾಡುತ್ತದೆ. ಅವರು ಮಾರಾಟ ಮಾಡಿದ ನಂತರ ಹಣವನ್ನು ಸರ್ಕಾರಕ್ಕೆ ನೀಡುತ್ತಾರೆ. ಹಾಗಾಗಿ ಅಬಕಾರಿ ಖಾತೆ ಬೇಡ ಎಂದೆ. ಸಿಎಂ ಅವರು ಪರಿಶೀಲನೆ ಮಾಡುತ್ತೇನೆ" ಎಂದು ಹೇಳಿದ್ದಾರೆ ಎಂದರು.
"ವಸತಿ ಖಾತೆಗಿಂತ ಉತ್ತಮವಾದ ಖಾತೆ ನೀಡುತ್ತೇನೆ ಎಂದು ಸಿಎಂ ಅವರು ಹೇಳಿದ್ದರು. ಆದರೆ, ಇದೀಗ ಅಬಕಾರಿ ಖಾತೆ ನೀಡಿದ್ದಾರೆ. ಅಬಕಾರಿ ಖಾತೆಯಲ್ಲಿ ನಾನು ಮಾಡುವಂತ ಕೆಲಸ ಏನೂ ಇಲ್ಲ. ಹಾಗಾಗಿ ಈ ಖಾತೆ ಬೇಡ ಎಂದು ಸಿಎಂ ಅವರಲ್ಲಿ ಹೇಳಿದ್ದೇನೆ" ಎಂದು ತಿಳಿಸಿದರು.