ಮಂಗಳೂರು, ಜ 21(DaijiworldNews/SM): ನಗರದ ಪಡೀಲ್ ಫೈಸಲ್ ನಗರ ಎಂಬಲ್ಲಿ ಬೈಕ್ ಸವಾರನೊಬ್ಬ ಬಸ್ ಚಾಲಕನ ಮೇಲೆ ಪೆಟ್ರೋಲ್ ಎರಚಿ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಚಾಲಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ವೆಲ್ಡರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಜಾಲ್ ನಿವಾಸಿ ಮೊಹಮ್ಮದ್ ಅಶ್ರಫ್ (26) ಎಂದು ಗುರುತಿಸಲಾಗಿದೆ. ನಗರದ 23 ನಂಬರ್ ನ ಸಿಟಿಬಸ್ ಚಾಲಕಸಂಪತ್ ಎಂಬವರ ಮೇಲೆ ಪೆಟ್ರೋಲ್ ಎರಚಿದ್ದು, ಘಟನೆಯಲ್ಲಿ ಸಂಪತ್ ಅಪಾಯದಿಂದ ಪಾರಾಗಿದ್ದರು.
ಸೈಡ್ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಬೈಕ್ ಸವಾರ ಹಾಗೂ ಬಸ್ ಚಾಲಕನ ನಡುವೆ ಘರ್ಷಣೆ ಎರ್ಪಟ್ಟಿತ್ತು ಎಂದು ತಿಳಿದು ಬಂದಿದೆ. ಇದೇ ದ್ವೇಷದಿಂದ ಬೈಕ್ ಸವಾರ ಪೆಟ್ರೋಲ್ ಎರಚಿದ್ದಾನೆ. ಈ ವೇಳೆ ಸ್ಥಳೀಯರು ಮಧ್ಯಪ್ರವೇಶಿಸಿ ಚಾಲಕನಿಗೆ ಬೆಂಕಿ ಹಚ್ಚದಂತೆ ಆರೋಪಿಗಳನ್ನು ತಡೆದಿದ್ದಾರೆ.
ಆರೋಪಿಯನ್ನು ಕಾನೂನಿನಡಿಯಲ್ಲಿ ರೌಡಿ ಶೀಟರ್ ಎಂದು ಪರಿಗಣಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಮಾಹಿತಿ ನೀಡಿದರು.