ಮಂಜೇಶ್ವರ, ಜ 21(DaijiworldNews/SM): ಪಾನಮತ್ತನಾಗಿ ಮನೆಗೆ ಬಂದ ವ್ಯಕ್ತಿಯೋರ್ವ ಅತ್ತೆ ಹಾಗೂ ಇತರ ಇಬ್ಬರು ಮಹಿಳೆಯರನ್ನು ಕತ್ತಿಯಿಂದ ಕಡಿದ ಘಟನೆ ಗುರುವಾರ ಮಧ್ಯಾಹ್ನ ಉಪ್ಪಳ ಸಮೀಪದ ಸೋಂಕಾಲು ಎಂಬಲ್ಲಿ ನಡೆದಿದೆ. ಬೆಳ್ತಂಗಡಿಯ ರವಿ(40) ಪ್ರಕರಣದ ಆರೋಪಿಯಾಗಿದ್ದಾನೆ.
ಸೋಂಕಾಲು ಶಾಂತಿಗುರಿಯ ಲಕ್ಷ್ಮಿ, ಮಕ್ಕಳಾದ ಮಾಧವಿ ಮತ್ತು ರುಕ್ಮಿಣಿ ಘಟನೆಯಲ್ಲಿ ಗಾಯಗೊಂಡವರು. ಮಧ್ಯಾಹ್ನ ಮನೆಗೆ ಬಂದ ಬೆಳ್ತಂಗಡಿಯ ರವಿ ಎಂಬಾತ ಕ್ಷುಲ್ಲಕ ಕಾರಣಕ್ಕಾಗಿ ಜಗಳಕ್ಕಿಳಿದು ಅತ್ತೆ ಹಾಗೂ ಪತ್ನಿಯ ಇಬ್ಬರು ಸಹೋದರಿಯರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ.
ಗಾಯಾಗೊಂಡ ಮೂವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಮಧ್ಯಾಹ್ನ 2.30ರ ಸುಮಾರಿಗೆ ಮನೆಗೆ ಬಂದ ಈತ ಅತ್ತೆ ಹಾಗೂ ಪತ್ನಿಯ ಸಹೋದರಿಯರ ಮೇಲೆ ವಾಗ್ವಾದ ನಡೆಸಿದ್ದಾನೆ. ಅಲ್ಲದೆ, ಇದೇ ಸಂದರ್ಭದಲ್ಲಿ ಮನೆಯಲ್ಲಿದ್ದ ಕತ್ತಿಯಿಂದ ಕಡಿದಿದ್ದಾನೆ.
ಕೃತ್ಯದ ಬಳಿಕ ಪರಾರಿಯಾಗಲೆತ್ನಿಸಿದ ರವಿಯನ್ನು ಸ್ಥಳೀಯರು ಹಿಡಿದು ಮಂಜೇಶ್ವರ ಪೊಲೀಸರಿಗೊಪ್ಪಿಸಿದ್ದಾರೆ.