ಬೆಂಗಳೂರು, ಜ 21(DaijiworldNews/SM): ರಾಜ್ಯದಲ್ಲಿ ಸಚಿವರಿಗೆ ಖಾತೆ ಹಂಚಿಕೆ ಸಂದರ್ಭದಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಅಶೋಕ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಎಲ್ಲರನ್ನು ಸಂತೃಪ್ತಗೊಳಿಸಲು ದೇವರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಸಮರ್ಪಕವಾಗಿ ಯೋಚಿಸಿ ನಿರ್ಧಾರವನ್ನು ಕೈಗೊಂಡಿದ್ದಾರೆ. ಬಹುತೇಕ ಎಲ್ಲರ ಜೊತೆ ಮಾತುಕತೆ ಮಾಡಲಾಗಿದೆ. ಸಿಎಂ ಮೇಲೆ ಎಲ್ಲರಿಗೂ ಭರವಸೆ ಇದೆ. ಸಮಸ್ಯೆಯನ್ನು ಶೀಗ್ರದಲ್ಲೇ ಬಗೆಹರಿಸಲಿದ್ದಾರೆ. ಇನ್ನು ಮಾಧುಸ್ವಾಮಿಯವರೂ ರಾಜೀನಾಮೆ ನೀಡಿಲ್ಲ. ಅವರಿಗೂ ಉತ್ತಮ ಖಾತೆ ಸಿಕ್ಕಿದೆ. ಇದು ಸಾಮೂಹಿಕ ನಿರ್ಧಾರ ಆಗಿರವಾಗಿದ್ದು, ಯಾವುದೇ ಅಡ್ಡಿಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಖಾತೆ ಬದಲಾವಣೆ ಮುಖ್ಯಮಂತ್ರಿ ಅವರ ಪರಮಾಧಿಕಾರ. ಮುಖ್ಯಮಂತ್ರಿಗಳಿಗೆ ಇತರ ಸಚಿವರು ಪ್ರಶ್ನೆ ಮಾಡುವ ಹಾಗಿಲ್ಲ. ನಾನು ಯಾವುದೇ ಖಾತೆ ಕ್ಯಾತೆ ತೆಗಿದಿಲ್ಲ. ನಾನು ಗೃಹ ಇಲಾಖೆಯನ್ನೂ ಕೇಳಿಲ್ಲ. ನಾನು ಖಾತೆ ಬದಲಾವಣೆಗೆ ಬಯಸಿಲ್ಲ ಎಂದು ಸಚಿವ ಅಶೋಕ್ ಅವರು ಸ್ಪಷ್ಟಪಡಿಸಿದ್ದಾರೆ.