ಹೈದರಾಬಾದ್, ಜ.21 (DaijiworldNews/PY): ಅಂಗಡಿಯಿಂದ ಬೀಡಿ ತರಲು ತಡಮಾಡಿದ ಎನ್ನುವ ಕಾರಣಕ್ಕೆ ವ್ಯಕ್ತಿಯೋರ್ವ 10 ವರ್ಷದ ಪುತ್ರನಿಗೆ ಬೆಂಕಿ ಹಚ್ಚಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ವ್ಯಕ್ತಿಗೆ ಪುತ್ರ ಸರಿಯಾಗಿ ಓದುತ್ತಿಲ್ಲ ಎನ್ನುವ ಸಿಟ್ಟು ಕೂಡಾ ಇತ್ತು. ಜ.17ರ ರವಿವಾರ ರಾತ್ರಿ ಆತ ಪುತ್ರನ ಮೇಲೆ ಟರ್ಪೆಂಟೈನ್ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ" ಎಂದು ಪೊಲೀಸರು ಹೇಳಿದ್ದಾರೆ.
"ವ್ಯಕ್ತಿಯು ಮದ್ಯವ್ಯಸನಿಯಾಗಿದ್ದ ಎಂದು ತಿಳಿದುಬಂದಿದ್ದು, ಆತನನ್ನು ಬಂಧಿಸಲಾಗಿದೆ. ಸದ್ಯ ಆ ವ್ಯಕ್ತಿ ಜೈಲಿನಲ್ಲಿದ್ದಾನೆ"ಎಂದು ತಿಳಿಸಿದ್ದಾರೆ.