ಬೆಂಗಳೂರು,ಜ.21 (DaijiworldNews/HR): "ಸಂಪುಟ ರಚನೆ ಮಾಡುವುದಾಗಲಿ ಅಥವಾ ಖಾತೆ ಹಂಚುವುದಾಗಲಿ ಸುಲಭದ ಕೆಲಸವಲ್ಲ, ಸಣ್ಣಪುಟ್ಟ ಅಸಮಾಧಾನವಿರುವುದು ಸಹಜ ಹಾಗಾಗಿ ಅವರೆಲ್ಲರನ್ನು ಕರೆಸಿ ನಾನು ಮಾತನಾಡುತ್ತೇನೆ" ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಾಧುಸ್ವಾಮಿ, ಗೋಪಾಲಯ್ಯ ಅವರೆಲ್ಲರು ಸಮಾಧಾನವಾಗಿದ್ದಾರೆ, ಯಾರಿಗೂ ಅಸಮಾಧಾನವಿಲ್ಲ. ಅವರೆಲ್ಲರನ್ನೂ ಕರೆಸಿ ಅವರೊಂದಿಗೆ ನಾನು ಮಾತನಾಡುತ್ತೇನೆ" ಎಂದರು.
ಇನ್ನು "ನಾನು ಈಗ ನೀಡಿರುವಂತಹ ಖಾತೆಯಲ್ಲಿ ಸ್ವಲ್ಪ ದಿವಸ ಕೆಲಸ ಮಾಡಲಿ" ಸರಿ ಹೋಗಿಲ್ಲ ಅಂದರೆ ಆ ಮೇಲೆ ಉತ್ತಮ ಖಾತೆ ನೀಡೋಣ" ಎಂದು ಹೇಳಿದ್ದಾರೆ.