ಅಮರಾವತಿ, ಜ.21 (DaijiworldNews/MB) : ಹಿಂದೂಗಳು ಬೆಕ್ಕುಗಳಲ್ಲ, ಬಿಜೆಪಿ ಏಕಾಂಗಿಯಾಗಿ ಮುನ್ನಡೆಯುವುದು ಉತ್ತಮ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಬಿಜೆಪಿ ನಾಯಕ ಸುನಿಲ್ ಡಿಯೋದರ್ ಅವರು ಟಿವಿ ವಾಹಿನಿಯೊಂದಿಗೆ ಮಾತನಾಡುತ್ತಾ, ''ಟಿಡಿಪಿ ಮತ್ತು ವೈಎಸ್ಆರ್ ಪಕ್ಷ ಎರಡೂ ಬಿಜೆಪಿಯ ನಂಬರ್ 1 ಶತ್ರುಗಳು'' ಎಂದು ಹೇಳಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿಯವರು, ''ಟಿಡಿಪಿ ಮತ್ತು ವೈಎಸ್ಆರ್ ಪಕ್ಷ ಎರಡೂ ಬಿಜೆಪಿಯ ನಂಬರ್ 1 ಶತ್ರುಗಳು ಎಂದು ಬಿಜೆಪಿ ನಾಯಕ ಸುನಿಲ್ ಡಿಯೋದರ್ ಮಾಧ್ಯಮದಲ್ಲಿ ಸ್ಪಷ್ಟವಾಗಿ ಹೇಳಿದ್ದಕ್ಕೆ ನನಗೆ ಸಂತೋಷವಾಗಿದೆ. ಕ್ರಿಶ್ಚಿಯನ್ ಪ್ರಾಬಲ್ಯದ ಬಗ್ಗೆ ಟಿಡಿಪಿಯ ಸುಳ್ಳುಗಳನ್ನು ಬಹಿರಂಗಪಡಿಸುವ ವಿಚಾರದ ಮಟ್ಟಿಗೆ ನಾನು ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಅವರನ್ನು ಬೆಂಬಲಿಸುತ್ತೇನೆ. ಹಿಂದೂಗಳು ಬೆಕ್ಕುಗಳಲ್ಲ, ಬಿಜೆಪಿ ಏಕಾಂಗಿಯಾಗಿ ಮುನ್ನಡೆಯುವುದು ಉತ್ತಮ'' ಎಂದಿದ್ದಾರೆ.