ಪುಣೆ, ಜ.21 (DaijiworldNews/MB) : ದೇಶದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದಿರುವ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಲಸಿಕೆ ''ಕೋವಿಶೀಲ್ಡ್''ನ ತಯಾರಕ ಸಂಸ್ಥೆ ಪುಣೆಯ 'ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ'ದ ಸಂಕೀರ್ಣದಲ್ಲಿ ಗುರುವಾರ ಬೆಂಕಿ ಅವಘಡ ಸಂಭವಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪ್ರತ್ಯಕ್ಷದರ್ಶಿಗಳು, ''ಸೀರಂ ಇನ್ಸ್ಟಿಟ್ಯೂಟ್ನ ಆವರಣದಲ್ಲಿ ಹೊಗೆ ಕಾಣಿಸಿಕೊಂಡಿದೆ'' ಎಂದು ಹೇಳಿದ್ದಾರೆ. ಇನ್ನು ಸಂಸ್ಥೆಯ ಆವರಣದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿರುವ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಲಸಿಕೆ ಉತ್ಪಾದನೆಯಾಗುತ್ತಿರುವ ಭಾಗಕ್ಕೆ ಯಾವುದೇ ಹಾನಿಯಾಗಿಲ್ಲ. ಲಸಿಕೆಗಳು ಸುರಕ್ಷಿತವಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.