ಧಾರವಾಡ, ಜ.21 (DaijiworldNews/PY): ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿಯನ್ನು ಗುರುವಾರ ಹೈಕೋರ್ಟ್ ವಜಾಗೊಳಿಸಿದೆ.
ಬುಧವಾರ ಅಜಿಯ ವಿಚಾರಣೆ ನಡೆಸಿದ ವೇಳೆ ಜಾಮೀನು ನೀಡದಂತೆ ಸಿಬಿಐ ಪರ ವಕೀಲರು ಮನವಿ ಮಾಡಿದ್ದು, ಸೂಕ್ತವಾದ ದಾಖಲೆ ಒದಗಿಸಲು ಒಂದು ದಿನದ ಕಾಲಾವಕಾಶವನ್ನೂ ಕೇಳಿದ್ದರು.
ಈ ಹಿನ್ನೆಲೆ ವಿಚಾರಣೆಯನ್ನು ಗುರುವಾರ ಮುಂದುರೆಸಿದ ನ್ಯಾ. ಕೆ.ಎನ್.ನಟರಾಜ ಅವರಿದ್ದ ನ್ಯಾಯಪೀಠ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
2016ರಲ್ಲಿ ನಡೆದಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ವಿಚಾರಣೆ ಹಿನ್ನೆಲೆ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನದಲ್ಲಿದ್ದಾರೆ.