ನವದೆಹಲಿ,ಜ.21 (DaijiworldNews/HR): ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 15,223 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,06,10,883ಕ್ಕೆ ಏರಿಕೆಯಾಗಿದ್ದು, ಇಲ್ಲಿವರೆಗೂ 8,06,484 ಜನರಿಗೆ ಕೊರೊನಾ ಲಸಿಕೆ ಹಾಕಲಾಗಿದೆ.
ಒಟ್ಟು ಪ್ರಕರಣಗಳ ಪೈಕಿ 1,02,65,706 ಮಂದಿ ಗುಣಮುಖರಾಗಿದ್ದು, 1,52,869 ಮಂದಿ ಸಾವನ್ನಪ್ಪಿದ್ದಾರೆ. ಪ್ರಸ್ತುತ 1,92,308 ಪ್ರಕರಣಗಳು ಸಕ್ರಿಯವಾಗಿದ್ದು, ದೇಶದಲ್ಲಿ ಈವರೆಗೂ 8,06,484 ಜನರಿಗೆ ಕೊರೊನಾ ಲಸಿಕೆ ಹಾಕಲಾಗಿದೆ.
ಇನ್ನು ಪ್ರಸ್ತುತ ಕರ್ನಾಟಕದಲ್ಲಿ 7,873 ಪ್ರಕರಣಗಳು ಸಕ್ರಿಯವಾಗಿವೆ.