ಬೆಂಗಳೂರು, ಜ.21 (DaijiworldNews/MB) : ''ನಮ್ಮ ಬಗ್ಗೆ ಚಿಂತಿಸುವ ಬದಲು ನಿಮ್ಮದೇ ಅಸ್ತಿತ್ವದ ಬಗ್ಗೆ ಚಿಂತಿಸಿ'' ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಪ್ರತಿಭಟನಾನಿರತ ರೈತರಿಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ನಡೆಸಿದ ರಾಜಭವನ ಚಲೋ ಬಗ್ಗೆ ಮಾತನಾಡಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು, ''ಕಾಂಗ್ರೆಸಿಗರು ನಾವು ಬದುಕಿದ್ದೇವೆ ಎಂದು ತೋರಿಸಲು ಪ್ರತಿಭಟನೆ ಮಾಡುತ್ತಿದ್ದಾರೆ'' ಎಂದು ವ್ಯಂಗ್ಯವಾಡಿದ್ದರು.
ಈ ಹೇಳಿಕೆಯ ವರದಿಯೊಂದನ್ನು ಉಲ್ಲೇಖಿಸಿ ಟ್ವೀಟ್ ಮೂಲ ತಿರುಗೇಟು ನೀಡಿರುವ ಕಾಂಗ್ರೆಸ್, ''ಬಿ ಎಸ್ ಯಡಿಯೂರಪ್ಪನವರೇ, 135 ವರ್ಷಗಳಿಂದಲೂ ಕಾಂಗ್ರೆಸ್ ಈ ದೇಶದ ಸೇವೆ ಮಾಡಿಕೊಂಡು ಬಂದಿದೆ, ಮುಂದೆಯೂ ಜನಸೇವೆಯಲ್ಲಿ ಮುಂದುವರೆಯಲಿದೆ. ತಾವು ಕಾಂಗ್ರೆಸ್ ಬಗ್ಗೆ ಚಿಂತಿಸುವ ಬದಲು ನಿಮ್ಮದೇ ಅಸ್ತಿತ್ವದ ಬಗ್ಗೆ ಚಿಂತಿಸಿ. ಬಿಜೆಪಿಯು ಬಿ ಎಸ್ ಯಡಿಯೂರಪ್ಪ ಮುಕ್ತ ಬಿಜೆಪಿ ಮಾಡಲು ತಂತ್ರ ರೂಪಿಸಿದೆ. ಹೈಕಮಾಂಡ್ ಎದುರು ನಿಮ್ಮ ಅಸ್ತಿತ್ವ ತೋರುವ ಬಗ್ಗೆ ಯೋಚಿಸಿ'' ಎಂದು ಹೇಳಿದ್ದಾರೆ.