ಬೆಂಗಳೂರು, ಜ.21 (DaijiworldNews/PY): ಮಲಯಾಳಂ ಸಿನಿಮಾದ ಹಿರಿಯ ನಟ ಉನ್ನಿಕೃಷ್ಣನ್ ನಂಬೂದರಿ (98) ಅವರು ನಿಧನ ಹೊಂದಿದ್ದಾರೆ.
ಉನ್ನಿಕೃಷ್ಣನ್ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇವರಿಗೆ ಕೊರೊನಾ ಸೋಂಕು ತಗುಲಿತ್ತು.
ನ್ಯುಮೋನಿಯಾ ಹಿನ್ನೆಲೆ ಉನ್ನಿಕೃಷ್ಣನ್ ಅವರುನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿದ ಸಂದರ್ಭ ಅವರಿಗೆ ಕೊರೊನಾ ದೃಢಪಟ್ಟಿತ್ತು. ಕೆಲವು ದಿನಗಳ ಚಿಕಿತ್ಸೆಯ ಬಳಿಕ ಅವರು ಕೊರೊನಾದಿಂದ ಮುಕ್ತರಾಗಿದ್ದು, ಮನೆಗೆ ಮರಳಿದ್ದರು.
1996ರಲ್ಲಿ ಬಿಡುಗಡೆಯಾದ 'ದೇಸದಾನಂ' ಸಿನಿಮಾದಲ್ಲಿ ಉನ್ನಿಕೃಷ್ಣನ್ ಅವರು ಮೊದಲ ಬಾರಿಗೆ ನಟಿಸಿದ್ದರು. ಬಳಿಕ ಹಲವು ಹಿಟ್ ಹಾಗೂ ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯ ತಾತನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಇವರು ಖ್ಯಾತ ನಿರ್ದೇಶಕ ಕೆದಪ್ರಂ ದಾಮೋದರನ್ ನಂಬೂದರಿ ಅವರ ಮಾವನಾಗಿದ್ದು, 'ದೇಶಿಕಾನಂ' ಹಾಗೂ 'ಕಲ್ಯಾಣರಾಮನ್' ಮುಂತಾದ ಅನೇಕ ಸಿನೆಮಾಗಳ್ಲಲಿ ಅಜ್ಜನ ಪಾತ್ರದಲ್ಲಿ ನಟಿಸಿದ್ದಾರೆ.
ಉನ್ನಿಕೃಷ್ಣನ್ ಅವರು ತಮ್ಮ ಕಿರಿಯ ಪುತ್ರ ಹೈಕೋರ್ಟ್ ನ್ಯಾಯಾಧೀಶ ಪಿ.ವಿ. ಕನ್ನಿಕೃಷ್ಣನ್ ಅವರೊಂದಿಗೆ ವಡುತಲದಲ್ಲಿನ ತಮ್ಮ ಮನೆಯಲ್ಲಿ ನೆಲೆಸಿದ್ದರು.
ಉನ್ನಿಕೃಷ್ಣನ್ ಅವರು 'ಕಲ್ಯಾಣರಾಮನ್', 'ಚಂದ್ರಮುಖಿ', ಪಮ್ಮಲ್ ಕೆ. 'ಸಂಬಂಧಂ' ಚಿತ್ರಗಳಲ್ಲಿ ನಟಿಸಿದ್ದಾರೆ.