ಬೆಂಗಳೂರು, ಜ.21 (DaijiworldNews/HR): "ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಚ್ ವಾರೆಂಟ್ ಜಾರಿಗೊಳಿಸುವ ಮುನ್ನ ಎಲ್ಲ ಸಂದರ್ಭದಲ್ಲೂ ಸಮನ್ಸ್ ನೀಡುವ ಆವಶ್ಯಕತೆ ಇಲ್ಲ" ಎಂದು ಹೈಕೋರ್ಟ್ ತಿಳಿಸಿದೆ.
ಬೆಂಗಳೂರಿನ ಡಿ.ಜೆ. ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪಕ್ಷದ ಕಚೇರಿಯಲ್ಲಿ ಶೋಧ ನಡೆಸಲು ವಾರೆಂಟ್ ಜಾರಿ ಮಾಡಿದ್ದ 44ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಎಸ್ಡಿಪಿಐ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಇನ್ನು "ಈ ಅರ್ಜಿ ವಿಚಾರಣೆ ವೇಳೆ ಸೆಕ್ಷನ್ 93(1)(ಸಿ) ಪ್ರಕಾರ ಸಮನ್ಸ್ ನೀಡದೆ ಶೋಧ ನಡೆಸಲು ವಾರೆಂಟ್ ಜಾರಿಗೊಳಿಸಬಹುದು. ಅದರಂತೆ ಅಪರಾಧ ಪ್ರಕರಣಗಳ ಸಂಬಂಧ ಎಲ್ಲ ಸಂದರ್ಭದಲ್ಲೂ ಶೋಧನಾ ವಾರೆಂಟ್ ಜಾರಿಗೊಳಿಸುವ ಮೊದಲು ಸಮನ್ಸ್ ನೀಡುವ ಆವಶ್ಯಕತೆ ಇಲ್ಲ" ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.