ಬೆಂಗಳೂರು, ಜ.21 (DaijiworldNews/HR): ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಚಿವರ ಖಾತೆ ಹಂಚಿಕೆ ಹಾಗೂ ಬದಲಾವಣೆ ಪ್ರಕ್ರಿಯೆಯನ್ನು ಬುಧವಾರ ತಡರಾತ್ರಿ ಪೂರ್ಣಗೊಳಿಸಿದ್ದು, ಬಳಿಕ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಸಚಿವರ ಖಾತೆಗಳು:
ಎಸ್. ಅಂಗಾರ (ಬಂದರು ಮತ್ತು ಮೀನುಗಾರಿಕೆ), ಕೋಟ ಶ್ರೀನಿವಾಸ ಪೂಜಾರಿ (ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ), ಸಿ.ಸಿ.ಪಾಟೀಲ್ (ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ), ಉಮೇಶ್ ಕತ್ತಿ (ಆಹಾರ, ನಾಗರಿಕ ಪೂರೈಕೆ ಇಲಾಖೆ), ಮುರುಗೇಶ್ ನಿರಾಣಿ (ಗಣಿ, ಭೂ ವಿಜ್ಞಾನ), ಬಸವರಾಜ ಬೊಮ್ಮಾಯಿ (ಗೃಹ, ಕಾನೂನು, ಸಂಸದೀಯ ವ್ಯವಹಾರ), ಆನಂದ್ ಸಿಂಗ್ (ಪ್ರವಾ ಸೋದ್ಯಮ, ಪರಿಸರ ಇಲಾಖೆ), ಜೆ.ಸಿ.ಮಾಧುಸ್ವಾಮಿ (ವೈದ್ಯಕೀಯ ಶಿಕ್ಷಣ, ಕನ್ನಡ-ಸಂಸ್ಕೃತಿ ಇಲಾಖೆ), ಅರವಿಂದ ಲಿಂಬಾವಳಿ (ಅರಣ್ಯ), ಎಂಟಿಬಿ ನಾಗರಾಜ್ (ಅಬಕಾರಿ), ಡಾ| ಕೆ. ಸುಧಾಕರ (ಆರೋಗ್ಯ), ಸಿ. ಪಿ. ಯೋಗೇಶ್ವರ್ (ಸಣ್ಣ ನೀರಾವರಿ), ಆರ್. ಶಂಕರ್(ಪೌರಾಡಳಿತ ಹಾಗೂ ರೇಷ್ಮೆ ಇಲಾಖೆ), ಕೆ.ಸಿ. ನಾರಾಯಣ ಗೌಡ(ಯುವ ಸಬಲೀಕರಣ, ಕ್ರೀಡೆ, ಹಜ್ ಮತ್ತು ವಕ್ಫ್), ಗೋಪಾಲಯ್ಯ (ತೋಟಗಾರಿಕೆ, ಸಕ್ಕರೆ).
ಸುಳ್ಯದ ಎಸ್. ಅಂಗಾರ ಅವರು 27 ವರ್ಷಗಳ ಬಳಿಕ ಸಚಿವ ಸ್ಥಾನ ಪಡೆದಿದ್ದಾರೆ. ಈ ಹಿಂದೆ ಕೋಟ ಶ್ರೀನಿವಾಸ್ ಅವರು ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ, ಬಂದರು ಮತ್ತು ಮೀನುಗಾರಿಕೆ ಖಾತೆ ಹೊಂದಿದ್ದರು. ಇದೀಗ ಈ ಪೈಕಿ ಬಂದರು ಮತ್ತು ಮೀನುಗಾರಿಕೆ ಖಾತೆ ಅಂಗಾರರಿಗೆ ದಕ್ಕಿದೆ.