ಬೆಂಗಳೂರು, ಜ.21 (DaijiworldNews/MB) : ''ಕಾಂಗ್ರೆಸಿಗರ ಪ್ರತಿಭಟನೆ ಬರೀ ಒಂದು ನಾಟಕ'' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಪ್ರತಿಭಟನಾನಿರತ ರೈತರಿಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ನಡೆಸಿದ ರಾಜಭವನ ಚಲೋ ಬಗ್ಗೆ ವಿಧಾನಸೌಧದಲ್ಲಿ ಬುಧವಾರ ಮಾತನಾಡಿದ ಅವರು, ''ಕಾಂಗ್ರೆಸಿಗರಿಗೆ ರೈತರ ಮೇಲೆ ಯಾವುದೇ ಕಾಳಜಿ ಇಲ್ಲ, ಎಲ್ಲವೂ ಒಂದು ನಟಕವಷ್ಟೇ ಎಂದು ಹೇಳಿದ್ದು, ಕಾಂಗ್ರೆಸಿಗರ ಈ ಪ್ರತಿಭಟನೆಯಿಂದ ಎಲ್ಲೆಡೆ ಸಂಚಾರದಟ್ಟನೆ ಉಂಟಾಯಿತು'' ಎಂದು ಕಿಡಿಕಾರಿದರು.
''ಕಾಂಗ್ರೆಸ್ನವರು ದಂದ್ವ ನಿಲುವು ಹೊಂದಿದ್ದಾರೆ. ಅವರ ಕಾಲದಲ್ಲೇ ಎಪಿಎಂಸಿ, ಭೂಸುಧಾರಣೆ ಕಾನೂನುಗಳು ಬಂದಿದೆ. ಆದರೆ ಈಗ ಅವರು ಪ್ರತಿಭಟನೆ ಮಾಡುತ್ತಿದ್ದಾರೆ'' ಎಂದು ದೂರಿದರು.
''ನಿಜವಾಗಿ ಕಾಂಗ್ರೆಸ್ನವರೇ ರೈತರು, ರೈತ ಸಂಘಟನೆಗಳಿಗೆ ಉತ್ತರ ನೀಡಬೇಕು'' ಎಂದು ಆಗ್ರಹಿಸಿದರು.