ಸುಳ್ಯ, ಜ. 20 (DaijiworldNews/SM): ಇಲ್ಲಿನ ಜಯನಗರದಲ್ಲಿ 6ನೇ ತರತಿಯ ವಿದ್ಯಾರ್ಥಿಯೋರ್ವಳು ಅಸೌಖ್ಯದಿಂದ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಜಯನಗರ ನಿವಾಸಿ ಬಾಬು ಮತ್ತು ಗೀತಾ ಅವರ ಪುತ್ರಿ ಜನನಿ ಎಂಬಾಕೆಯೇ ಮೃತಪಟ್ಟ ಬಾಲಕಿಯಾಗಿದ್ದಾಳೆ. ಬಾಲಕಿಗೆ ಜ್ವರ ಕಾಣಿಸಿಕೊಂಡಿದ್ದು ಮದ್ದು ತಂದಿದ್ದರು. ಆದರೆ ಬಾಲಕಿ ಗುಣಮುಖಗೊಂಡಿರಲಿಲ್ಲ. ಬಳಿಕ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.