ಮಂಗಳೂರು, ಜ 20(DaijiworldNews/SM): ದಕ್ಷಿಣ ಕನ್ನಡ ಆರೋಗ್ಯ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ ಬುಧವಾರ 16 ಹೊಸ ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 33,479ಕ್ಕೆ ಏರಿಕೆಯಾಗಿದೆ. ಈ ಪೈಕಿ 242 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ.
ಒಟ್ಟು 5,01,802 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 4,68,323 ಮಂದಿಯ ವರದಿ ನೆಗೆಟಿವ್ ಆಗಿದೆ. ಬುಧವಾರ 42 ಜನರನ್ನು ಬಿಡುಗಡೆ ಮಾಡಲಾಗಿದೆ. ಈವರೆಗೆ ಒಟ್ಟು 737 ಸಾವುಗಳು ಸಂಭವಿಸಿವೆ.
ಉಡುಪಿ ಜಿಲ್ಲೆಯ ಇಂದಿನ ಕೊರೋನಾ ವರದಿ:
ಬುಧವಾರದಂದು 7 ಹೊಸ ಪ್ರಕರಣಗಳು ಸೇರಿದಂತೆ ಜಿಲ್ಲೆಯ ಕೊರೋನಾ ವೈರಸ್ ಸಂಖ್ಯೆ 23,234ಕ್ಕೆ ಏರಿಕೆಯಾಗಿದೆ. ಈ ಪೈಕಿ 30 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ. ಈವರೆಗೆ 3,24,828 ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 3,01,594 ನಕಾರಾತ್ಮಕವಾಗಿವೆ.
ಬುಧವಾರ 4 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಈವರೆಗೆ ಒಟ್ಟು 189 ಸಾವುಗಳು ಸಂಭವಿಸಿವೆ.