ಕಲಬುರ್ಗಿ, ಜ.20 (DaijiworldNews/PY): "ರಾಜಭವನ ಚಲೋ ಕಾರ್ಯಕ್ರಮವು ರೈತವಿರೋಧಿ ಸರ್ಕಾರ ಕೊನೆಗಾಣಿಸಲು ಮುನ್ನುಡಿಯಾಗಿದೆ" ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
"ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆ ಹಾಗೂ ರೈತರ ಪ್ರತಿಭಟನೆ ಬೆಂಬಲಿಸಿ ಕಾಂಗ್ರೆಸ್ನಿಂದ ನಡೆಸಲಾಗುತ್ತಿರುವ ರಾಜಭವನ ಚಲೋ ಪ್ರತಿಭಟನೆಯಿಂದ ಬಿಜೆಪಿ ಸರ್ಕಾರ ಶೀಘ್ರವೇ ತಕ್ಕ ಪ್ರತಿಫಲ ಅನುಭವಿಸಲಿದೆ" ಎಂದಿದ್ದಾರೆ.
"ರೈತವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯುವವರೆಗೆ ರೈತರ ಹೋರಾಟ ನಿಲ್ಲದು. ರೈತವಿರೋಧಿ ಸರ್ಕಾರ ಕೊನೆಗಾಣಿಸಲು ರಾಜಭವನ ಚಲೋ ಕಾರ್ಯಕ್ರಮವು ಒಂದು ಮುನ್ನುಡಿಯಾಗಿದೆ" ಎಂದು ಹೇಳಿದ್ದಾರೆ.