ಮುಂಬೈ, ಜ.20 (DaijiworldNews/MB) : ಡ್ರ್ಯಾಗನ್ ಹಣ್ಣನ್ನು 'ಕಮಲಂ' ಎಂದು ಮರುನಾಮಕರಣ ಮಾಡುವ ಗುಜರಾತ್ ಸರ್ಕಾರದ ತೀರ್ಮಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವ್ಯಂಗ್ಯ ಮಾಡಲಾಗುತ್ತಿರುವ ನಡುವೆಯೇ ಎನ್ಸಿಪಿಯೂ ಕೂಡಾ ಬಿಜೆಪಿಯನ್ನು ಲೇವಡಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್ಸಿಪಿ ಮುಖ್ಯ ವಕ್ತಾರ ಮಹೇಶ್ ತಪಾಸೆ, ''ಬಿಜೆಪಿ ಈಗ ಹಣ್ಣುಗಳ ಮೇಲೂ ತನ್ನ ಬ್ರಾಂಡ್ ಮಾಡಲು ಪ್ರಾರಂಭಿಸಿದೆ. ಬಿಜೆಪಿ ಭಾರತವನ್ನು ಶೀಘ್ರವೇ ಹಿಂದೂಸ್ತಾನ್ ಅನ್ನು ಕಮಲಸ್ತಾನ್ ಎನ್ನಲಿದೆ'' ಎಂದು ತಿರುಗೇಟು ನೀಡಿದ್ದಾರೆ.
''ಡ್ರ್ಯಾಗನ್ ಹಣ್ಣಿಗೆ ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಡ್ರ್ಯಾಗನ್ ಎಂಬ ಹೆಸರು ಚೀನಾದೊಂದಿಗೆ ತಳುಕು ಹಾಕಿಕೊಂಡಿದೆ. ಹಣ್ಣಿನ ಹೊರ ಆಕಾರವು ಕಮಲವನ್ನು ಹೋಲುತ್ತದೆ. ಆದ್ದರಿಂದ ಡ್ರ್ಯಾಗನ್ ಹಣ್ಣನ್ನು 'ಕಮಲಂ' ಎಂದು ಮರುನಾಮಕರಣ ಮಾಡಬೇಕು'' ಎಂದು ಮಂಗಳವಾರ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದರು.