ಚೆನ್ನೈ, ಜ.20 (DaijiworldNews/PY): "ಶುಕ್ರವಾರದಂದು ರಾಜೀವ್ ಗಾಂಧಿ ಸರ್ಕರಿ ಜನರಲ್ ಆಸ್ಪತ್ರೆಯಲ್ಲಿ ನಾನೂ ಕೂಡಾ ಕೊರೊನಾ ಲಸಿಕೆ ಹಾಕಿಸಿಕೊಳ್ಳುತ್ತೇನೆ" ಎಂದು ತಮಿಳುನಾಡು ಆರೋಗ್ಯ ಸಚಿವ ಡಾ.ಸಿ.ವಿಜಯಭಾಸ್ಕರ್ ಹೇಳಿದ್ದಾರೆ.
ರಾಜ್ಯಕ್ಕೆ ಹೆಚ್ಚುವರಿಯಾಗಿ ಬಂದ 5,08,500 ಡೋಸ್ ಲಸಿಕೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜನರಲ್ಲಿ ಇದಕ್ಕಿಂತ ಮೊದಲು ಭಯವಿತ್ತು. ಜನರ ಆತಂಕ ದೂರ ಮಾಡಲು ಹಲವರು ವೈದ್ಯರು ಸೇರಿದಂತೆ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಕೊರೊನಾ ಲಸಿಕೆ ತೆಗೆದುಕೊಂಡಿದ್ದಾರೆ. ನಾನೂ ಕೂಡಾ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ತೀರ್ಮಾನ ಮಾಡಿದ್ದೇನೆ. ಓರ್ವ ವೈದ್ಯ ಹಾಗೂ ಐಎಂಎ ಸದಸ್ಯನಾಗಿ ನಾನು ಲಸಿಕೆ ಹಾಕಿಸಿಕೊಳ್ಳುತ್ತೇನೆ" ಎಂದಿದ್ದಾರೆ.
"ಆರೋಗ್ಯ ಕಾರ್ಯಕರ್ತರು ಸೇರಿದಂತೆ ನರ್ಸ್ಗಳ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ನಾನು ಲಸಿಕೆ ತೆಗೆದುಕೊಳ್ಳಲಿದ್ದೇನೆ. ಎರಡು ಲಸಿಕೆಗಳ ಪೈಕಿ ವೈದ್ಯರು ನೀಡುವ ಲಸಿಕೆಯನ್ನು ನಾನು ಹಾಕಿಸಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.