ನವದೆಹಲಿ, ಜ.20 (DaijiworldNews/PY): ಭಾರತದಲ್ಲಿ ಪ್ರತಿವರ್ಷ ಜ.30ರಂದು ಹುತಾತ್ಮ ದಿನವನ್ನು ಆಚರಿಸಲಾಗುತ್ತದೆ. ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ದಿನವನ್ನು ಅವರ ಮೇಲಿನ ಗೌರವಕ್ಕಾಗಿ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಗೃಹ ಸಚಿವಾಲಯ ಪತ್ರ ಬರೆದಿದ್ದು, "ಕೇಂದ್ರ ಸರ್ಕಾರವು ಜ.30ರಂದು ಹುತಾತ್ಮ ದಿನವನ್ನು ಆಚರಿಸಿಕೊಂಡು ಬರುತ್ತಿದ್ದು, ಜ.30ರಂದು ಬೆಳಗ್ಗೆ ತಮ್ಮ ಕೆಲಸ-ಕಾರ್ಯಗಳನ್ನು ಬದಿಗೊತ್ತಿ ಎರಡು ನಿಮಿಷ ಮೌನಾಚರಣೆ ಮಾಡಲು ಸೂಚನೆ ನೀಡಬೇಕು" ಎಂದು ತಿಳಿಸಿದೆ.
1948ರ ಜನವರಿ 30ರಂದು ಗಾಂಧಿ ಹತ್ಯೆಯಾದ ದಿನದಂದು ಪ್ರತಿ ವರ್ಷ ಹುತಾತ್ಮ ದಿನ ಆಚರಿಸಿಕೊಂಡು ಬರಲಾಗುತ್ತಿದೆ.