ಮುಂಬೈ, ಜ.20 (DaijiworldNews/MB) : ಭಾರತವು ತನ್ನ ನೆರೆ ರಾಷ್ಟ್ರ ಭೂತಾನ್ಗೆ ಉಡುಗೊರೆಯಾಗಿ ಕೊರೊನಾ ಲಸಿಕೆ ಕೋವಿಶೀಲ್ಡ್ನ್ನು ರವಾನೆ ಮಾಡಿದೆ.
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೋವಿಶೀಲ್ಡ್ ಲಸಿಕೆಯ 1.5 ಲಕ್ಷ ಡೋಸೇಜ್ಗಳನ್ನು ಬುಧವಾರ ಭೂತಾನ್ಗೆ ರವಾನಿಸಲಾಗಿದ್ದು ಕೊರೊನಾ ಲಸಿಕೆಯನ್ನು ಉಡುಗೊರೆಯಾಗಿ ಪಡೆದ ಮೊದಲ ರಾಷ್ಟ್ರ ಎಂಬ ಗೌರವಕ್ಕೆ ಭೂತಾನ್ ಪಾತ್ರವಾಗಿದೆ.
ಭಾರತ ಹಾಗೂ ಭೂತಾನ್ ಅನ್ಯೋನ್ಯ ಬಾಂಧವ್ಯವನ್ನು ಹೊಂದಿದ್ದು, ಕೊರೊನಾ ಸಂದರ್ಭದಲ್ಲೂ ಅಗತ್ಯ ವಸ್ತುಗಳ ಪೂರೈಕೆ ಮಾಡಿದೆ. ಕೊರೊನಾ ಸಂದರ್ಭದಲ್ಲೂ ಭಾರತದಿಂದ ಭೂತಾನ್ಗೆ 2.8 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ಪಿಪಿಇ ಕಿಟ್, ಎನ್95 ಮಾಸ್ಕ್ ಸೇರಿದಂತೆ ಅಗತ್ಯ ಔಷಧಿ ಹಾಗೂ ವೈದ್ಯಕೀಯ ಸಾಮಾಗ್ರಿಗಳನ್ನು ಭಾರತದಿಂದ ಸಾಗಾಟ ಮಾಡಲಾಗಿದೆ. ಹಾಗೆಯೇ ಇಲ್ಲಿದ್ದ ೨ ಸಾವಿರ ಭೂತಾನ್ ಪ್ರಜೆಗಳನ್ನು ಕೂಡಾ ಸುರಕ್ಷಿತವಾಗಿ ಸರ್ಕಾರ ಕಳುಹಿಸಿಕೊಟ್ಟಿದೆ.