ನವದೆಹಲಿ, ಜ.20 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರು ಗುರುಗೋವಿಂದ್ ಸಿಂಗ್ ಅವರ 354ನೇ ಜನ್ಮ ದಿನಾಚರಣೆ ಪ್ರಯುಕ್ತ ಗೌರವ ನಮನ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು,"ನಾನು ಗುರುಗೋವಿಂದ್ ಸಿಂಗ್ ಅವರಿಗೆ ತಲೆ ಬಾಗುತ್ತೇನೆ, ಅವರು ತಮ್ಮ ಜೀವನವನ್ನು ಸಮಾಜಕ್ಕಾಗಿ ಮೀಸಲಿಟ್ಟಿದ್ದರು" ಎಂದು ಬರೆದುಕೊಂಡಿದ್ದಾರೆ.
ಇನ್ನು "ಗುರುಗೋವಿಂದ್ ಸಿಂಗ್ ಅವರ ಧೈರ್ಯ ಮತ್ತು ತ್ಯಾಗಗಳನ್ನು ನಾವು ಯಾವಾಗಲೂ ಸ್ಮರಿಸಬೇಕು" ಎಂದು ಹೇಳಿದ್ದಾರೆ.